deshadoothanews

ವಿಧಾನಸಭಾ ಚುನಾವಣೆ: ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳು

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

ಕೊಪ್ಪಳ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಏಪ್ರೀಲ್ 24 ರಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

 

60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ತುಕಾರಮ ಸೂರ್ವೆ ಹಾಗೂ ಮಹಮ್ಮದ ನಜೀರುದ್ದೀನ್ ಮೂಲಿಮನಿ ಎಂಬುವವರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.,

 

61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ ಕೋಟಿ, ಕಲ್ಯಾಣಂ ನಾಗರಾಜ ಹಾಗೂ ಬಸವರಾಜ ಮ್ಯಾಗಳಮನಿ ಎಂಬುವವರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.,

 

62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮನೋಹರ ಹಾಗೂ ಭಾಗ್ಯವಂತ ಎಂಬುವವರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.,

 

63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದಲಿಂಗ, ರವಿತೇಜ ಅಧಿಕಾರಿ ಹಾಗೂ ಹನುಮೇಶ ಎಂಬುವವರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.,

 

64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮಂಜುನಾಥ ಸಾಲಿಮಠ ಹಾಗೂ ಮೂರ್ತೆಪ್ಪ ಗಿಣಿಗೇರಿ ಎಂಬುವವರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.