deshadoothanews

ಬಿಜೆಪಿ ಟ್ರಬಲ್ ಇಂಜಿನ್ ಸರಕಾರ, ಮಾಜಿ ಸಚಿವ ರಾಯರಡ್ಡಿ ಆರೋಪ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕುಕನೂರು

ರಾಜ್ಯದಲ್ಲಿ ದಬಲ್ ಇಂಜಿನ್ ಸರಕಾರವಿಲ್ಲ ಬರಿ ಟ್ರಬಲ್ ಇಂಜಿನ್ ಸರಕಾರವಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದರು.

ತಾಲೂಕಿನ ಸೋಂಪೂರ, ಮಾಳೆಕೊಪ್ಪ, ಮನ್ನಾಪೂರ, ಇಟಗಿ, ಮಂಡಲಗೇರಿ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಾವೆಲ್ಲರೂ ಮತವನ್ನು ನೀಡಬೇಕು. ನಾನು ಸಮಾಜಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರವಿದೆ ಎಂದು ಬಿಜೆಪಿಯವರು ಹೇಳುತ್ತೀದ್ದಾರೆ ಅದು ಟ್ರಬಲ್ ಇಂಜಿನ್ ಸರಕಾರವಾಗಿದೆ. ಇತ್ತೀಚಿಗೆ ಬಿಜೆಪಿಯವರು ರಾಜಕೀಯ ವ್ಯವಸ್ಥೆಯನ್ನು ವಾಮ ಮಾರ್ಗದ ಜಾತಿ, ಹಣ, ಹೆಂಡದಲ್ಲಿ ರಾಜಕಾರಣ ಮಾಡುತ್ತಾರೆ. ಕೇಂದ್ರ ಸರಕಾರ ಜನರು ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಿದೆ. ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾರೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ೧೭ ಮಂದಿ ಶಾಸಕರನ್ನು ಖರೀದಿ ಮಾಡಿ ಸರಕಾರ ರಚನೆ ಮಾಡಿದರಲ್ಲ ಅವಾಗ ಎಲ್ಲಿ ಹೋಗಿತ್ತು ಇವರ ತತ್ವ ಸಿದ್ದಾಂತ. ನಾನು ೧೮ ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಇದು ನನ್ನ ೧೨ನೇ ಚುನಾವಣೆಯಾಗಿದೆ, ಸಚಿವ ಹಾಲಪ್ಪ ಆಚಾರ್ ಅವರ ಕುಟುಂಬ ಮಹಿಳೆಯರಿಗೆ ಸೀರೆ ಹಂಚಿ ಮತದಾರರಿಗೆ ಆಮಿಷ್‌ವನ್ನು ಓಡ್ಡುತ್ತಿದ್ದಾರೆ ಇಂತಹ ವ್ಯವಸ್ಥೆಯಿಂದ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ನಾನು ಶಾಸಕನಾದರೆ ತಾಲೂಕಿನ ೬೦ ಕೆರೆಗಳನ್ನು ತುಂಬಿಸಲಾಗುವದು. ಈಗಾಗಲೇ ೨೬ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ. ಒಂದು ಸೂಪರ್ ಟೇಕ್ ಆಸ್ಪತ್ರೆ ಮಾಡುತ್ತೇನೆ. ಯಲಬುರ್ಗಾ ಕ್ಷೇತ್ರವು ಕಳೇದ ೫ ವರ್ಷಗಳಿಂದ ಹಾಳಾಗಿ ಹೋಗಿದೆ ಎಂದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ, ಕಾಂಗ್ರೆಸ್ ವಕ್ತಾರ ಶಿವನಗೌಡ ದಾನರೆಡ್ಡಿ, ಸಂಗಮೇಶ ಗುತ್ತಿ, ತಾಲೂಧ್ಯಕ್ಷ ಹನುಮಂತಗೌಡ ಚಂಡೂರು, ಮುಖಂಡರಾದ ವೀರನಗೌಡ ಬಳೂಟಗಿ, ಬಸವಪ್ರಭು ಪಾಟೀಲ್, ಮಂಜುನಾಥ ಕಡೇಮನಿ, ಬಸವರಾಜ ಮಾಸೂರು, ಸಂತೋಷ ಬನ್ನಿಕೊಪ್ಪ, ಆನಂದ ಮಲ್ಲಣ್ಣವರ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ಕುಕನೂರು ತಾಲೂಕಿನ ಮಾಳೇಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು.

Leave A Reply

Your email address will not be published.