deshadoothanews

ಕುಷ್ಟಗಿ: ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ನಿಮ್ಮ‌ ಮತವನ್ನು ನೀಡು ಮೂಲಕ ನನ್ನನ್ನು ಬಹುಮತದಿಂದ ಆಯ್ಕೆ ಮಾಡಬೇಕುಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕುಷ್ಟಗಿ

ಕುಷ್ಟಗಿ ತಾಲೂಕಿನ ತುಮರಿಕೊಪ್ಪ,  ಬಾದಿಮನಾಳ ಸೇರಿದಂತೆ ನಾನಾ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು

ಮತಯಾಚನೆ ಮಾಡಿ ಮಾತನಾಡಿದ ಅವರು,  ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಮಾಣಿಕ ಪ್ರಯತ್ನ ಮಾಡಿರುವೆ. ತಾಲೂಕಿನ ಎಲ್ಲಾ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಿರುವೆ.
ಕಾಂಗ್ರೇಸ್ ಪಕ್ಷವು ಬಡವರ, ರೈತರ ದಮನಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಕಾಂಗ್ರೇಸ್ ಪಕ್ಷದ ಗುರುತು ಆದ ಕೈ ಗುರುತಿಗೆ ನಿಮ್ಮ ಮತವನ್ನು ನೀಡವ ಮೂಲಕ ಅತಿ‌ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕು ಎಂದರ.

ನಂತರ ತಿಮ್ಮನಟ್ಟಿ, ಗೋರೆಬಿಹಾಳ,ವೆಂಕಟಾಪೂರ, ಮಾವಿನಿಇಟಗಿ, ಗುಡದೂರುಕಲ್, ಚಂದ್ರಗಿರಿ, ಮದ್ನಾಳ, ಯರಾಗೇರಾ

ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಮಾಲತಿ ನಾಯಕ, ಉದ್ಯಮಿ‌ ಬಸನಗೌಡ ಮಾಲಿಪಾಟೀಲ್, ಲಿಂಗರಾಜ ಹಂಚಿನಾಳ ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಕಾರ್ಯಕರ್ತರು ಇದ್ದರು.

ಕುಷ್ಟಗಿ ತಾಲೂಕಿನ ಗೋರೆಬಿಹಾಳ, ತಿಮ್ಮನಟ್ಟಿ ಗ್ರಾಮದಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತಯಾಚನೆ ಮಾಡಿದರು.

Leave A Reply

Your email address will not be published.