deshadoothanews

ಕಾರಟಗಿ: ಕಡಿಮೆ ಮತದಾನ ಹೊಂದಿದ ಗ್ರಾ.ಪಂಗಳಲ್ಲಿ ಮತದಾನ ಜಾಗೃತಿ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕಾರಟಗಿ

ಕೊಪ್ಪಳ : ಕಾರಟಗಿ ತಾಲೂಕಿನ ಬೇವಿನಹಾಳ್ ಗ್ರಾ.ಪಂ.ನ ಕಡಿಮೆ ಮತದಾನ ಪ್ರಮಾಣ ಹೊಂದಿದ ವ್ಯಾಪ್ತಿಯಲ್ಲಿ ಏಪ್ರಿಲ್ 24ರಂದು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಮತದಾನದ ಜಾಗೃತಿ ಹಾಗೂ ಅಣಕು ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಕುರಿತು ಮಾಹಿತಿಯನ್ನು ನೀಡಿ, ಸಾರ್ವಜನಿಕರಿಂದಲೇ ಅಣಕು ಮತದಾನ ಮಾಡಿಸಲಾಯಿತು. ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದು, ಗ್ರಾ.ಪಂ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮತದಾನವಾಗಲು ಸಹಕರಿಸಲು ಸ್ವೀಪ್ ಸಮಿತಿಯಿಂದ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಟಿಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಇತರರು ಇದ್ದರು.

Leave A Reply

Your email address will not be published.