deshadoothanews

ಮುಸ್ಲಿಂ ಭಾಂದವರಿದ ಸಡಗರ ಸಂಭ್ರಮದಿದ ರಂಜಾನ್ ಆಚರಣೆ

ಡಿ ಡಿ ನ್ಯೂಸ್

0

ಯಲಬುರ್ಗಾ: ಪಟ್ಟಣದ ಮುಸ್ಲಿಂ ಭಾಂದವರಿAದ ರಂಜಾನ್ ಹಬ್ಬವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ಆಚರಿಸಲಾಯಿತು ಪಟ್ಟಣದ ಜಾಮೀಯಾ ಮಸ್ಜಿದ್‌ನಿಂದ ಮೆರವಣಿಗೆ ಮೂಲಕ ಹೊರಟ ಸಾವಿರಾರು ಸಂಖ್ಯೆಯ ಭಾಂದವರು ವಿವಿಧ ವೃತ್ತದ ಮೂಲಕ ಇದ್ಗಾ ತಲುಪಿ ಪ್ರಾರ್ಥನೆ ಸಲ್ಲಿಸಿದರು.
ಸತತ ಒಂದು ತಿಂಗಳ ಕಾಲ ಉಪವಾಸ ಮೂಲಕ ಅತ್ಯಂತ ಕಟ್ಟು ನಿಟ್ಟಾಗಿ ಆಚರಣೆ ಮಾಡಿದ ಸಮಾಜ ಭಾಂದವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ರಂಜಾನ್ ಮುಕ್ತಾಯಗೋಳಿಸಿದರು.

ಈ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಮಾಜದ ಮುಖಂಡ ಮೌಲಾಹುಸೇನ್ ಬುಲ್ಡಿಯಾರ್ ಸಮಾಜದಲ್ಲಿ ಮುಸ್ಲಿಂ ಭಾಂದವರು ಇನ್ನಿತರ ಸಮಾಜದೊಂದಿಗೆ ಅವಿನಾಭಾವ ಸಂಬಧವನ್ನು ಹೊಂದಿದ್ದು ಸಹಭಾಳ್ವೆಗೆ ಹೆಸರುವಾಸಿಯಾದ ನಮ್ಮ ತಾಲೂಕು ಇನ್ನಿತರರಿಗೆ ಮಾದರಿಯಾಗಿದೆ ಹಾಗೂ ಅಲ್ಲಾಹುನು ಎಲ್ಲಾ ಸಮಾಜದವರಿಗೆ ಒಳಿತನ್ನು ಮಾಡಲಿ ಹಾಗೂ ಉತ್ತಮ ಮಳೆ ಬೆಳೆ ಆಗಿ ರೈತ ಸಮುದಾಯಕ್ಕೆ ಉತ್ತಮ ಆದಾಯ ಬರುವಂತಾಗಲಿ ಎಂದರು.
ರಾಯರಡ್ಡಿ ಶುಭಾಶಯಕ್ಕೆ ಸಮಾಜ ಭಾಂದವರ ವಿರೋಧ: ಪ್ರಾರ್ಥನೆ ನಂತರ ಕಾಂಗ್ರೇಸ್ ಮುಖಂಡರೊಬ್ಬರು ಮಾಜಿ ಸಚಿವರಾದ ಬಸವರಾಜ ರಾಯರಡ್ಡಿಯವರು ಮೊಬೈಲ್ ಸಂದೇಶದ ಮೂಲಕ ಶುಭಾಶಯ ಕೋರಿದ್ದಾರೆ ಅನ್ನುವದರೊಳಗೆ ಸಮಾಜದ ಭಾಂದವರು ವಿರೋಧ ವ್ಯಕ್ತಪಡಿಸಿದರು ನಮ್ಮ ಸಮಾಜದ ಮೇಲೆ ಅವರಿಗೆ ಅಷ್ಟೊಂದು ಗೌರವವಿದ್ದರೆ ಇಲ್ಲಿಗೆ ಆಗಮಿಸಿ ಶುಭಾಶಯ ಕೋರಬಹುದಿತ್ತು ಅದನ್ನು ಬಿಟ್ಟು ಮೇಸೆಜೆ ಮಾಡಿದರೆ ಹೇಗೆ ಅಂತವರಿಗೆ ನಾವು ಬೆಲೆ ಕೊಡುವದಿಲ್ಲಾ ಅವರ ಹೆಸರನ್ನು ಹೆಳುವ ಅಗತ್ಯತೆ ಇಲ್ಲಾ ಎಂದು ವಿರೋದ ವ್ಯಕ್ತವಾದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ್ರ ಕೋನನಗೌಡ್ರ. ಶರಣಪ್ಪ ರಾಂಪೂರ. ಸಮಾಜದ ಅಧ್ಯಕ್ಷರಾದ ಬಾಬುಸಾಬ ಕುಂದಗೋಳ. ಕಾರ್ಯದರ್ಶಿ ಮೈನುದ್ದಿನ್ ಎಲಿಗಾರ. ಹಿರಿಯರಾದ ಅಕ್ತರಸಾಬ ಖಾಜಿ. ಮೈಬುಸಾಬ ಮಕಾಂದಾರ. ಮುನಾಪ್ ಮಕಾಂದಾರ. ಇಕ್ಬಾಲಸಾಬ ವಣಗೇರಿ, ಎಂ ಎಂ ನಧಾಪ್. ಪಾಷಾ ಗುಳೇದಗುಡ್ಡ. ಇಮಾಮಸಾಬ ಸಂಕನೂರ. ಖಾಜಾವಲಿ ಜರಕುಂಟಿ. ದಾದು ಎಲಿಗಾರ. ಬುಡ್ನೇಸಾಬ ಸಂಕನೂರ. ಬಾಬುಸಾಬ ಕೊತ್ವಾಲ್ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಹಾಜರಿದ್ದರು.
ಪೋಟೋ;

Leave A Reply

Your email address will not be published.