deshadoothanews

– ಹಿಟ್ನಾಳ್ ಜಿ.ಪಂ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರ – ಸಿವಿಸಿ, ಹಿಟ್ನಾಳ್ ವಿರುದ್ಧ ನವೀನ್ ತರಾಟೆ

ಡಿ ಡಿ ನ್ಯೂಸ್. ಕೊಪ್ಪಳ

0
ಹಿಟ್ನಾಳ್ ದೌರ್ಜನ್ಯ ಕೊನೆಗೊಳಿಸಿ, ಮಂಜುಳಾ ಗೆ ಮತ ನೀಡಿ: ನವೀನ್

 

ಶಾಸಕ ರಾಘವೇಂದ್ರ ಹಿಟ್ನಾಳ್ ಲಂಚಾವತಾರ, ದೌರ್ಜನ್ಯ ಕೊನೆಗೊಳಿಸಬೇಕು. ಆದ್ದರಿಂದ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರಿಗೆ ಮತ ನೀಡಿ, ಅವರನ್ನು ಬಾರೀ ಬಹುಮತದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ್ ಮನವಿ ಮಾಡಿದರು.
ಹಿಟ್ನಾಳ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮುನಿರಾಬಾದ್, ಮುದ್ಲಾಪುರ, ಮಟ್ಟಿ ಮುದ್ಲಾಪುರ, ಹಳೆ ಲಿಂಗಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಕೈಗೊಂಡರು.
ಬಿಜೆಪಿ ಸರ್ಕಾರವನ್ನು ಪರ್ಸೆಂಟೇಜ್ ಎನ್ನುವ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಬೆಂಗಳೂರಿನ ಶಾಸಕರ ಭವನದಲ್ಲಿ ಹಣ ಪಡೆದಿದ್ದು ಏಕೆ? ಅದು ಪರ್ಸೆಂಟೇಜ್ ಅಲ್ಲವೇ? ಹಿಟ್ನಾಳ್ ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ಗ್ರಾಮ ಪಂಚಾಯತಿ ಸದಸ್ಯರಿಗೆ ನಾಲ್ಕು ಲಕ್ಷ ರೂ. ನೀಡಬೇಕು. ಆದ್ದರಿಂದ ಕೇಬಲ ಅಳವಡಿಸಲು ಕಿ.ಮೀ.ಗೆ 5 ಲಕ್ಷ ರೂ. ನೀಡಿ ಎಂದು ಲಂಚ ಕೇಳಿರುವ ವಿಡಿಯೋ ವೈರಲ್ ಆಗಿದೆ. ಕೊಪ್ಪಳ ಶಾಸಕನಾಗಿ ಕ್ಷೇತ್ರದ ಮಾನ- ಮರ್ಯಾದೆ ಹರಾಜು ಹಾಕಿದ್ದಾರೆ. ಇಂತವರಿಗೆ ಮತ ನೀಡಬೇಡಿ ಎಂದರು.
ಇನ್ನು, ನಿರ್ಮಿತಿ ಕೇಂದ್ರ ದಲ್ಲಿ ಬಾರೀ ಭ್ರಷ್ಟಾಚಾರ ನಡೆಸಿ, ಚುನಾವಣೆ ಗೆ ನಿಂತಿರುವ ಸಿ.ವಿ.ಚಂದ್ರಶೇಖರ್ ಅವರು ಸಂಸದ ಸಂಗಣ್ಣ ಕರಡಿ ಅವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ನಿರ್ಮಿತಿ ಕೇಂದ್ರದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ಹಂತದಲ್ಲಿದೆ. ಇಲಾಖೆಯನ್ನು ಭ್ರಷ್ಟಗೊಳಿಸಿದ ಇವರು ಕ್ಷೇತ್ರದಿಂದ ಗೆದ್ದರೆ, ರಾಜಕೀಯದಲ್ಲಿ ಭ್ರಷ್ಟಾಚಾರ ತಾಂಡವವಾಡಲಿದೆ‌. ಇತಂಹವರಿಗೆ ಮತ ನೀಡದೇ ಬಿಜೆಪಿಯ ಮಹಿಳಾ ಅಭ್ಯರ್ಥಿ ಗೆ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಕೇಂದ್ರ ಹಾಗೂ ರಾಜ್ಯ ನಾಯಕರ ದೂರದೃಷ್ಟಿಯಿಂದ ಕೊಪ್ಪಳ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿ ಯನ್ನು ಘೋಷಿಸಿದ್ದಾರೆ. ನನ್ನನ್ನು ನಿಮ್ಮ ಮನೆ ಮಗಳಂತೆ ಭಾವಿಸಿ ಆಯ್ಕೆ ಮಾಡಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧಳಾಗಿದ್ದಾನೆ. ಜನರು ಆಶೀರ್ವಾದ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ್ ಹಿಟ್ನಾಳ, ಗವಿಸಿದ್ದಪ್ಪ ಕರಡಿ, ಪಾಲಾಕ್ಷಪ್ಪ ಗುಂಗಾಡಿ, ಯಲಬುರ್ಗಾ ಬಿಜೆಪಿ ಮುಖಂಡ ಸೋಮಣ್ಣ ಸೋಂಪುರ, ಎಪಿಎಂಸಿ ಮಾಜಿ ಸದಸ್ಯ ಸುದೇಶ್ ಪಟ್ಟಣಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾದ್ಯಕ್ಷೆ ವಾಣಿಶ್ರೀ ಮಠದ,ಶೋಭಾ ನಗರಿ,ಗಣೇಶ ಹೊರತಟ್ನಾಳ , ಬಸವರಾಜ ಭೋವಿ ,ಫಕೀರಸ್ವಾಮಿ,ಗವಿರಾಜ್,ಭಗತ್ ಗದಗಿನಮಠ, ಮಲ್ಲಿಕಾರ್ಜುನ ದಿವಟರ್,ವಸಂತ್ ನಾಯಕ,ಚಂದ್ರಸ್ವಾಮಿ,ಶಂಕರ್ ಪೂಜಾರ ,ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
–ಬಾಕ್ಸ್–
ಕ್ಷೇತ್ರದ ಜ್ವಲಂತ ಸಮಸ್ಯೆಗೆ ಪರಿಹಾರ:
ಕಳೆದ ದಶಕದಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಕೆಲ ನೀರಾವರಿ ಯೋಜನೆಗಳು ಆಮೆಗತಿಯಲ್ಲಿ ಸಾಗಿದರೆ, ಇನ್ನು ಕೆಲವು ಆರಂಭವೇ ಆಗಿಲ್ಲ. ರೈತರು ಜಮೀನಿಗೆ ನೀರು ಬರುತ್ತದೆ ಎಂದು ಆಶಾಭಾವನೆಯಲ್ಲಿ ಇದ್ದಾರೆ.‌ ಆದರೆ, ದಶಕದಿಂದ ನೀರೇ ಬಂದಿಲ್ಲ. ಕೆಲವಡೆ ಭೂ ಸ್ವಾಧೀನ ವಾಗಿದೆ. ರೈತರಿಗೆ ಹಣ ಬಂದಿಲ್ಲ. ನೀರಾವರಿ ಕ್ಷೇತ್ರದಲ್ಲಿ ಒಂದೇ ಇಷ್ಟೊಂದು ಸಮಸ್ಯೆಗಳು ತಾಂಡವವಾಡುತ್ತಿವೆ. ಜನತೆ ನನಗೆ ಮತ ಹಾಕಿ ಗೆಲ್ಲಿಸಿದರೆ ಆದ್ಯತೆ ಮೇರೆಗೆ ನೀರಾವರಿ ಯೋಜನೆ ಕೈಗೆತ್ತುಕೊಂಡು ಪೂರ್ಣಗೊಳಿಸುವುದಾಗಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಭರವಸೆ ನೀಡಿದರು.
–ಬಾಕ್ಸ್–
ಮತ ಪ್ರಚಾರಕ್ಕೆ ಸಾವಿರಾರು ಜನ ಭಾಗಿ: ಹಿಟ್ನಾಳ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಅಬ್ಬರದ ಪ್ರಚಾರ ನಡೆಯಿತು. ಪ್ರತಿಯೊಂದು ಗ್ರಾಮದಲ್ಲಿಯೂ ಮತ ಪ್ರಚಾರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗ್ರಾಮಗಳ ಮಹಿಳೆಯರು ಬಿಜೆಪಿ ಅಭ್ಯರ್ಥಿ ಯನ್ನು ಆಶೀರ್ವಾದಿಸಿದರು.
–ಕೋಟ್ಸ್–
ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರಿಗೆ ಮತ ನೀಡುವ ಮೂಲಕ ಮಹಿಳಾ ಅಭ್ಯರ್ಥಿ ಯನ್ನು ಬಾರೀ ಅಂತರದಿಂದ ಗೆಲ್ಲಿಸಬೇಕು. ಈ ಮೂಲಕ ಶಾಸಕ ಹಿಟ್ನಾಳ್ ದೌರ್ಜನ್ಯ ಕಡೆಗಣಿಸಬೇಕು.
– ನವೀನ್ ಗುಳಗಣ್ಣನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ.
Leave A Reply

Your email address will not be published.