deshadoothanews

ಸುಡು ಬಿಸಿಲಿನಲ್ಲಿ ೧೬ ಕಿಲೋಮೀಟರ್ ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿ

0
ಸುರಪುರ ಸುದ್ದಿ : ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಿದ್ದಾಜಿದ್ದಿನ ಕ್ಷೇತ್ರವಾದ ಸುರಪುರ ವಿಧಾನಸಭಾ ಕ್ಷೇತ್ರದಿಂದ ನರಸಿಂಹ ನಾಯಕ ರಾಜುಗೌಡ ರವರು ಮತ್ತೊಮ್ಮೆ ೪ನೆಯ ಬಾರಿಗೆ ಶಾಸಕರಾಗಲೆಂದು ಸುಮಾರು ೧೬ ಕಿಲೋಮೀಟರ್ ವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಇಬ್ಬರು ಯುವಕರು ಅಭಿಮಾನ ಮೆರೆದಿದ್ದಾರೆ.
ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಯುವಕ ಮಲ್ಲನಗೌಡ ಪೊಲೀಸ್ ಪಾಟೀಲ್ ಹಾಗೂ ಭೀಮಣ್ಣ ನಾಗುಂಡಿ ಎನ್ನುವ ಇಬ್ಬರು ಯುವಕರು  ಸುಡುವ ಬಿಸಿಲಿನಲ್ಲಿ ಸುಮಾರು 16 ಕಿಲೋಮೀಟರ್ ವರೆಗೆ ದೀಡ ನಮಸ್ಕಾರ ಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಮಾತಾಡಿದವರು ಅವರು ರಾಜುಗೌಡ್ರು ತಾಲೂಕಿನಾದ್ಯಂತ ಉತ್ತಮ ಅಭಿವೃದ್ಧಿ ಮಾಡಿದ್ದಾರೆ, ಅವರ ಜನಪರ ಕೆಲಸಗಳು ನಮಗೆ ಸ್ಪೂರ್ತಿ ನೀಡಿವೆ. ಹಾಗಾಗಿ ಶಾಸಕ ರಾಜುಗೌಡರು ನಾಲ್ಕನೇ ಬಾರಿಗೆ ಮತ್ತೊಮ್ಮೆ ಸುರಪುರ ಕ್ಷೇತ್ರದ ಶಾಸಕರಾಗಲೆಂದು ಸುರಪುರದ ನಗರದ ಆರಾಧ್ಯ ದೇವರಾದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಕರ್ನಳೂ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದದಿಂದ  ಸುಮಾರು 16 ಕಿಲೋಮೀಟರ್ ಗಳವರೆಗೆ ನಾವು ಅಭಿಮಾನದಿಂದ ದೀರ್ಘದಂಡ ನಮಸ್ಕಾರವನ್ನು ಹಾಕುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮರಲಿಂಗಪ್ಪ ಕರ್ನಾಳ, ಸುರಪುರ ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದೊಡ್ಡ ದೇಸಾಯಿ ದೇವರ ಗೋನಾಲ,ಭೀಮಣ್ಣ ಬೇವಿನಾಳ, ದೇವರಾಜ್ ಮಕಾಶಿ, ರಾಘವೇಂದ್ರ ಕರ್ನಾಳ, ಸಚಿನ್ ಕರ್ನಾಳ, ಶರಣಗೌಡ ಕರ್ನಾಳ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ರಾಜುಗೌಡರ ಅಭಿಮಾನಿಗಳು ಇದ್ದರು.
Leave A Reply

Your email address will not be published.