deshadoothanews

ಮೋದಿ ನಾಯಕತ್ವದಿಂದ ದೇಶ ಸುಭದ್ರ: ಹಾಲಪ್ಪ • ಕೇಂದ್ರ, ರಾಜ್ಯ ಸರಕಾರಗಳ ಸಾಧನೆಗಳ ಪ್ರತಿ ಬಿಡುಗಡೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ

ದೇಶದಲ್ಲಿ ಹಲವಾರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅವರಿಂದಲೇ ದೇಶದ ಜನತೆ ನೆಮ್ಮದಿಯಿಮದ ಬದುಕು ನಡೆಸುವಂತಾಗಿದೆ. ಯೋಧರಿಗೆ ಮುಕ್ತ ಸ್ವಾತಂತ್ರö್ಯ ನಿಡಿದ್ದಾರೆ. ದೇಶ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಸಾಧನೆಗಳ ಪ್ರತಿ ಬಿಡುಗಡೆಗೊಳಿಸಿ ನಂತರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶತೃ ರಾಷ್ಟçಗಳಿಗೆ ಸರ್ಜಿಕಲ್ ಸ್ಟೆöÊಕ್ ಮೂಲಕ ಎಚ್ಚರಿಕೆ ನೀಡಲಾಗಿದೆ. ರಾಜ್ಯ ಸರಕಾರವು ಸಾಕಷ್ಟು ಕಾರ್ಯಕ್ರಮಗಳನ್ನು ಕೊಡುವ ಮೂಲಕ ಜನಪರ ಸರಕಾರ ಎಂದೇನಿಸಿಕೊAಡಿದೆ. ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ದಲಿತ ಜನಾಂಗದ ಒಳ ಮೀಸಲಾತಿಯನ್ನು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಪರಿಷ್ಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ರೈತ ಮಕ್ಕಳ ಶಿಕ್ಷಣಕ್ಕೆ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಗೆ ವಿವಿ ಮಂಜೂರು ಮಾಡಿಸಿರುವ ಹೆಮ್ಮೆ ನನಗಿದೆ. ತಳಕಲ್ ಗ್ರಾಮದಲ್ಲಿ ವಿವಿ ತನ್ನ ಕಾರ್ಯಾಚರಣೆ ಆರಂಭ ಮಾಡಲಾಗಿದೆ. ಇಂಜನಿಯರಿAಗ್ ಕಾಲೇಜು ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳು ಇರಲಿಲ್ಲ, ಅವುಗಳಿಗೆ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡಿರುವೆ ಎಂದರು.
ಕ್ಷೇತ್ರದ ಜನರ ಆಶೀರ್ವದದಿಂದ ಶಾಸಕ, ಸಚಿವನಾದ ಬಳಿಕ ಕ್ಷೇತ್ರದ ಸಮಗ್ರ ಅಭಿವೃದ್ದಿ ಪಡಿಸಿದ್ದೇನೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರಕ್ಕೆ ಕೃಷ್ಣೆಯ ನೀರನ್ನು ತಂದು ಹರಿಸಿದ್ದೇನೆ, ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಮತ್ತೊಮ್ಮೆ ಶಾಸಕನಾಗುವುದು ಖಚಿತವಾಗಿದೆ ಎಂದರು.
ಈ ಸಂದರ್ಬದಲ್ಲಿ ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್.ಪೋಲಿಸಪಾಟೀಲ, ವೀರಣ್ಣ ಹುಬ್ಬಳ್ಳಿ, ರತನ ದೇಸಾಯಿ, ಅಮರೇಶ ಹುಬ್ಬಳ್ಳಿ, ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಅರವಿಂದಗೌಡ ಪಾಟೀಲ, ಅಯ್ಯನಗೌಡ ಕೆಂಚಮ್ಮನವರ, ಪ್ರಭುರಾಜ ಕಲಬುರ್ಗಿ, ಶಿವಪ್ಪ ವಾದಿ ಇತರರು ಇದ್ದರು.
ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಸಾಧನೆಗಳ ಪ್ರತಿಯನ್ನು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಬಿಡುಗಡೆಗೊಳಿಸಿದರು

Leave A Reply

Your email address will not be published.