deshadoothanews

ನರಸಾಪುರದಲ್ಲಿ ಕೊತ್ತೂರು ಮಂಜುನಾಥ್ ರವರಿಗೆ ಅದ್ದೂರಿ ಸ್ವಾಗತ

0
ವಿಧಾನಸಭಾ ಚುನಾವಣಾ ಅಖಾಡ ಕ್ಷಣ ಕ್ಷಣಕ್ಕೂ ರಂಗೇರುತ್ತಿದ್ದು, ಇಂದು ಘಟಾನುಘಟಿ ಮುಖಂಡರು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.
ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ರವರನ್ನು ಕೋಲಾರ ತಾಲೂಕಿನ ನರಸಾಪುರ, ಕುರ್ಕಿ, ಹಾಗೂ ಖಾಜಿ ಕಲ್ಲಹಳ್ಳಿಯ ಜನತೆ ಅದ್ದೂರಿಯಾಗಿ ಸ್ವಾಗತ ಕೋರಿದರು.
*ಇದೇ ಸಂದರ್ಭದಲ್ಲಿ ನರಸಾಪುರ ಗ್ರಾಮದ ಅಂಬೇಡ್ಕರ್ ನಗರ ವೃತ್ತದಲ್ಲಿ ಇರುವ  ಅಂಬೇಡ್ಕರ್ ಪುತ್ತಳಿಗೆ ಪುಷ್ಟಾರ್ಚನೆ ಮಾಡಿ ನಮನ ಸಲ್ಲಿಸಿದರು. ಹಾಗೂ ನರಸಾಪುರ ಗ್ರಾಮದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರುಗಳ ದರ್ಶನ ಪಡೆದರು*
ಸಾಮಾಜಿಕ ನ್ಯಾಯದ ಪರವಿರುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಿಳಿಸಿದರು.
ಮಾಜಿ ಸಿಎಂ. ಸಿದ್ದರಾಮಯ್ಯ ನವರ ಆಡಳಿತ ಅವಧಿಯಲ್ಲಿ ನೀಡಿರುವಂತ ಜನಪರ ಯೋಜನೆಗಳನ್ನು ಮೆಚ್ಚಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ್ಕೆ ಸೇರ್ಪಡೆಯಾಗುತ್ತಿದ್ದು ಅಪಾರವಾದ ಬೆಂಬಲ ಸಿಗುತ್ತಿದ್ದು ಗೆಲುವಿನ ನಗೆ ಬೀರಲಿದೆ ಎಂದು ತಿಳಿಸಿದರು.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪಿಸಬೇಕಾಗಿದೆ ಎಂದರು. ಇವೆಲ್ಲವೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ ಸಿ ನಜೀರ್ ಅಹಮ್ಮದ್, ಅನಿಲ್ ಕುಮಾರ್, ಸಿಎಂ ಮುನಿಯಪ್ಪ, ನಂದಿನಿ ಪ್ರವೀಣ್, ಚಂಜಿಮಲೆ ರಮೇಶ್, ಖಾಜಿಕಲ್ಲಹಳ್ಳಿ ಮುನಿರಾಜು, ಸೈಯದ್ ಪಾಷ, ನೌಶದ್ ಖಾನ್, ಏಜಜ್ ಉಲ್ಲಾ ಖಾನ್, ವಕ್ಕಲೇರಿ ಮುರಳಿ, ಬಾಬಣ್ಣ ( ನಾರಾಯಣಸ್ವಾಮಿ) ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು.
Leave A Reply

Your email address will not be published.