deshadoothanews

ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆ

0

 

ಕೊಪ್ಪಳ: ವಿಧಾನಸಭಾ ಕ್ಷೇತ್ರದ ಹಳ್ಳಿಗಳ ಯುವಜನತೆ, ಮಹಿಳೆಯರು ಹಾಗೂ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.


ನೀರಲಗಿ ಗ್ರಾಮದ ತಾಪಂ ಮಾಜಿ ಸದಸ್ಯ ಬಸವರಾಜ ಭಂಗಿ, ಗ್ರಾಪಂ ಸದಸ್ಯ ಸಣ್ಣ ಬಸವನಗೌಡ ಮಾಲೀಪಾಟೀಲ್, ಕೊಟ್ರೇಶ ಚಿಲಗೋಡು ಸೇರಿ ಹಲವರು ಬಿಜೆಪಿ ಸೇರ್ಪಡೆಗೊಂಡರು. ಸಂಸದ ಕರಡಿ ಸಂಗಣ್ಣ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಣೇಶ್, ವೆಂಕಟೇಶ್ ನೀರಲಗಿ, ವಕೀಲರಾದ ಪ್ರಕಾಶ್ ಆನಂದ ಹಳ್ಳಿ ಸೇರಿ ಮತ್ತಿತರರಿದ್ದರು.

Leave A Reply

Your email address will not be published.