deshadoothanews

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ತಿಮ್ಮಾಪೂರ ಗ್ರಾಮದಲ್ಲಿ ವಿಜಯೋತ್ಸವ

ಡಿ ಡಿ ನ್ಯೂಸ್. ಗದಗ

0

ಡಿ ಡಿ ನ್ಯೂಸ್. ಗದಗ

ರಾಜ್ಯದ ನೂತನವಾಗಿ 2 ನೇ ಬಾರಿ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯನವರು ಶೆನಿವಾರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆಯುವ ಮೂಲಕ ವಿಜಯೋತ್ಸವ ಆಚರಿಸಿದರು.

ಸಿದ್ದರಾಮಯ್ಯ ರಾಜ್ಯದ 23ನೇ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಿಮ್ಮಾಪೂರ ಗ್ರಾಮಸ್ಥರಲ್ಲಿ ಸಂತಸ ಮೂಡಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡೆತ್ತು ಮೇರವಣಿಗೆ ಮಾಡುವ ಮೂಲಕ ಯುವಕ ಹರಣಸಿಕಾರಿ ಜಾಜ್ ಮೇಳಕ್ಕೆ ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಮಕ್ಕಳು ಯುವಕರು ಮಹಿಳೆಯರೆನ್ನದೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಣ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲರ ಪರ ಘೋಷಣೆಗಳನ್ನು ಕೂಗುತ್ತ ಪರಸ್ಪರ ಬಂಡಾರ ಎರಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಗ್ರಾಮದ ಪ್ರಮುಖ ಬೀದಿಗಳ ತುಂಬ ಸಿದ್ದರಾಮಯ್ಯನವರ ಬ್ಯಾನರ್ ಕಟೌಟಗಳನ್ನು ಹಾಕಿಸಿದ್ದು ಅಭಿಮಾನಿಗಳನ್ನು ಖುಷಿಯನ್ನು ಪ್ರತಿಬಿಂಬಿಸಿತ್ತು.
ಗ್ರಾಮದ ಮಾರುತೇಶ್ವರ ದೇವರಿಗೆ ಕುಂಕುಮಾರ್ಚನೆ ಮಾಡಿ ವೀಳ್ಯದೆಲೆ ಪೂಜೆ ಮಾಡಿಸುವ ಮೂಲಕ ಹರಕೆಯನ್ನು ತೀರಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ , ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಹುಚ್ಚೀರಪ್ಪ ಜೋಗಿನ,ಗೀರಿಶ ಗುಡ್ಲಾನೂರ, ಯಲ್ಲಪ್ಪ ಹಾಗಲದ, ರವಿ ಬಿಕನಳ್ಳಿ ಶ್ರೀಕಾಂತ ಬಾಬರಿ,ಭೀಮಪ್ಪ ಆಲೂರು,ಕೀರಣ ಜೋಗಿನ, ರಾಮಪ್ಪ ಗಾಣದ, ಹನುಮಪ್ಪ ಹಳ್ಳಮ್ಮನವರ, ಶಿವಪುತ್ರಪ್ಪ ತಿಮ್ಮಾಪೂರ ಹಾಗೂ ನೂರಾರು ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Leave A Reply

Your email address will not be published.