deshadoothanews

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭಯೋತ್ಪಾದಕರ ಹಾವಳಿ : ಹಾಲಪ್ಪ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭಯೋತ್ಪಾದಕರ ಹಾವಳಿಯಿಂದ ದೇಶ ನೆಮ್ಮದಿಯಿಂದ ಇರಲಿಲ್ಲ, ದೇಶದ ಭದ್ರತೆ, ಅಭಿವೃದ್ಧಿ ದೃಷ್ಟಿಯಿಂದ ಜನತೆ ಹೊಸ ಬದಲಾವಣೆ ಬಯಸಿ ಕಳೆದ ಎಂಟು ವರ್ಷಗಳಿಂದ ಕೇಂದ್ರದದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಪರಿಣಾಮ, ಜನರ ಬೇಡಿಕೆಯಂತೆ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ ಎಂದು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಹೇಳಿದರು
ತಾಲೂಕಿನ ಶಿರಗುಂಪಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಕಥೆ ಮಗಿದಿದೆ, ದೇಶವನ್ನು ಅಭಿವೃದ್ಧಿಯಿಂದ ವಂಚಿರನ್ನಾಗಿ ಮಾಡಿದರು.

ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿಗೆ ಆದ್ಯತೆ, ಈಗಾಗಲೇ ಕೃಷ್ಣೆಯ ನೀರನ್ನು ತಂದು ಹರಿಸಲಾಗಿದೆ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ಯರೇ ಭಾಗದ ಗ್ರಾಮಗಳಲ್ಲಿ ಕೃಷಿ ಕಾರ್ಯಕ್ಕೆ ಅನುಕೂಲವಾಗಲು ಗ್ರಾಮೀಣ ರಸ್ತೆ ನಿರ್ಮಸಿರುವೆ, ತಾಲೂಕಿನ ೩೬ ಕೆರೆಗಳನ್ನು ಜೀರ್ಣೊದ್ದಾರ ಪಡಿಸಿರುವೆ ಎಂದರು.
ಮುಖಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್.ಪೋಲಿಸಪಾಟೀಲ, ರತನ ದೇಸಾಯಿ, ಕಳಕಪ್ಪ ಕಂಬಳಿ, ಹನುಮಂತಪ್ಪ ಹನುಮಾಪೂರ, ಶಕುಂತಲಾದೇವಿ ಪಾಟೀಲ, ಶರಣಪ್ಪ ಈಳಿಗೇರ, ಅಯ್ಯನಗೌಡ ಕೆಂಚಮ್ಮನವರ, ಯಲ್ಲಪ್ಪ ಹಡಗಲಿ, ಬಿ.ಎಚ್.ಪೋಲಿಸಪಟೀಲ ಲಿಂಗನಬಡಿ, ಅಮರೇಶ ಹುಬ್ಬಳ್ಳಿ, ಸಿದ್ದಪ್ಪ ಶಿರಗುಂಪಿ ಇತರರು ಇದ್ದರು.

ಯಲಬುರ್ಗಾ ತಾಲೂಕಿನ ಶಿರಗುಂಪಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಮಾತನಾಡಿದರು.

Leave A Reply

Your email address will not be published.