ಯಲಬುರ್ಗಾ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಾವೂ ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಒಂದೋದಾಗಿ ಜಾರಿಗೆ ತರುತ್ತಿದ್ದೆವೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು ಪಟ್ಟಣದ ಬಸ್ಸ ನಿಲ್ದಾಣದಲ್ಲಿ ಕೆ,ಎಸ್,ಆರ್,ಟಿ,ಸಿ,ಅಧಿಕಾರಿಗಳ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು .
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಯಲಬುರ್ಗಾ
ಐದು ಗ್ಯಾರಂಟಿಗಳ ಪೈಕಿ ಜನರನ್ನು ಮೊದಲು ತಲುಪುತ್ತಿರುವುದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ. ಇದೇ ಜೂನ್ 11 ರಂದು ಮದ್ಯಾಹನ್ನ ಯೋಜನೆ ಜಾರಿಯಾಗುತ್ತಿದ್ದು,
ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ್ ಬಸ್ ಪ್ರಯಾಣದ ಅವಕಾಶವನ್ನು ನೀಡಲಾಗಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.
ಕರ್ನಾಟಕ ರಾಜ್ಯದ ಮಹಿಳೆಯರು ಸೇರಿ 6 ರಿಂದ 12 ವರ್ಷದೊಳಗಿನ ಬಾಲಕಿಯರು, ಲೈಂಗಿಕ ಅಲ್ಪಸಂಖ್ಯಾತರು. ಮಂಗಳ ಮುಖಿಯರು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ನೆರೆ ರಾಜ್ಯಗಳ ಬಸ್ಸಿನಲ್ಲಿ ಅವಕಾಶವಿಲ್ಲ ಕರ್ನಾಟಕದ ಸುತ್ತಲು ಕೋನೆಯ ಹದ್ದು ಬಸ್ತಿನ ವರಗೆ ಪ್ರಯಾಣ ಮಾಡ ಬಹುದೆಂದು ಹೇಳಿದರು.
ನಂತರ ಡಿ,ಟಿ,ಓ,ಆರ್,ಬಿ,ಜಾದವ್ ಮಾತನಾಡಿ ಶಕ್ತಿ ಯೋಜನೆಗೆ ಇದೇ ಭಾನುವಾರ ಮಧ್ಯಾಹ್ನ 1 ಗಂಟೆ ಹಸಿರು ನಿಶಾನೆಯನ್ನ ಶಾಸಕ ಬಸವರಾಜ ರಾಯರಡ್ಡಿ ನೀಡಲಿದ್ದಾರೆ ಯಲಬುರ್ಗಾ ಮಾರ್ಗವಾಗಿ ಧರ್ಮಸ್ಥಳ ಉಚಿತ ಪ್ರಯಾಣಕ್ಕೆ ಚಾಲನೆ ನೀಡಲಾಗುವದು ಬಳಿಕ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಿದರು.
ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಯಾವುದೇ ದೂರದ ಮಿತಿಯಿಲ್ಲ. ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು.
ಪ್ರಯಾಣಿಸುವಾಗ ಅಗತ್ಯ ದಾಖಲೆ ಇರಬೇಕು, ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ವಾಸಸ್ಥಳ ರೇಷನ್ ಕಾರ್ಡ ನಮೂದಿಸಿರುವ ಗುರುತಿನ ಚೀಟಿ, ಅಂಗವಿಕಲ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಅಥವಾ ಇವುಗಳಲ್ಲಿ ಯಾವುದಾದರೊಂದು ಗುರುತಿನ ಪತ್ರ ಇರಬೇಕು.
ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ವಾಸಸ್ಥಳ ನಮೂದಾಗಿರಬೇಕು ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ ವಿಠಲ್ ಚೌಗಲಾ
ಯಲಬುರ್ಗಾ ಸಾರಿಗೆ ಘಟಕದ ವ್ಯವಸ್ಥಾಪಕ ರಮೇಶ ಚೀಣಗಿ ,ಕುಕನೂರು ಸಾರಿಗೆ ಘಟಕದ ವ್ಯವಸ್ಥಾಪಕ ಸುನೀಲ ಹೈದ್ರಿ ಮುಖಂಡರುಗಳಾದ ಬಸವರಾಜ ಉಳ್ಳಾಗಡ್ಡಿ, ಕೆರೆ ಬಸಪ್ಪ ನಿಡಗುಂದಿ,ಆನಂದ ಉಳ್ಳಾಗಡ್ಡಿ
ಡಾ,ಶಿವನಗೌಡ ದಾನರಡ್ಡಿ ಶರಣಪ್ಪ ಕರಂಡಿ,ಶರಣಪ್ಪ ಗಾಂಜಿ, ಷಣ್ಮುಖಪ್ಪ ರಾಂಪೂರ,ಸುಧೀರ್ ಕೋರ್ಲಳ್ಳಿ ರೀಯಾಜ್ ಖಾಜಿ, ರೇವಣೇಪ್ಪ ಹಿರೇ ಕುರಬರ.ಹನಮಂತಪ್ಪ ಭಜಂತ್ರಿ.ಹುಲಗಪ್ಪ ಬಂಡಿವಡ್ಡರ ರೇಹಮಾನ್ ಸಾಬ ನಾಯಕ,
ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು,