ಡಿ ಡಿ ನ್ಯೂಸ್. ಯಲಬುರ್ಗಾ
ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಪ್ರಿಲ್ 27ರಂದು ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರ ಸಭೆ ನಡೆಯಿತು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಅವರು ಮಾತನಾಡಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಂದ ಮತದಾನ ಪಡೆಯಲು ಏಪ್ರಿಲ್ 29 ರಿಂದ ಮನೆ ಭೇಟಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ, ವಿಕಲಚೇತನ ನಾಗರೀಕರು ಅಂಚೆ ಮತದಾನ ಕೋರಿ 12 ಡಿ 423 ಅರ್ಜಿ ಸ್ವೀಕೃತವಾಗಿವೆ. ಪ್ರತಿ ಮತದಾರರ ಮನೆ ಮನೆಗೆ 10 ಮೊಬೈಲ್ ಪಿವಿಸಿ ಮೂಲಕ ಮತದಾನವನ್ನು ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಮತದಾರರಿಗೆ ಚುನಾವಣೆ ಅರಿವು ಮೂಡಿಸಲು ತಿಳುವಳಿಕೆ ಪತ್ರದ ಮೂಲಕ ಮನೆಯಲ್ಲಿರಲು ಮನವಿ ಮಾಡಲಾಗಿದೆ. ಪ್ರತಿ ಮತಗಟ್ಟೆಯ ಬಿಎಲ್ಒ ಮುಖಾಂತರ ತಿಳುವಳಿಕೆ ಪತ್ರ ನೀಡಲು ಚುನಾವಣಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ತಹಶೀಲ್ದಾರರಾದ ನೀಲಪ್ರಭಾ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.