deshadoothanews

ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆ ಪ್ರಯುಕ್ತ ಬೆಳ್ಳಿ ರಥೋತ್ಸವ ಮೇರವಣಿಗೆ.

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ :

ಪಂಡಿತ ಪಂಚಾಕ್ಷರಿ ಗವಾಯಿ ಗಳವರ 79ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ರವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯ ರಂಗಭೂಮಿ ಹಾಗೂ ಸಾಂಸ್ಕೃತಿಕ ಕಲಾ ಸಂಘದವರಿಂದ ಪಂಡಿತ್‌ ಪುಟ್ಟರಾಜ್ ಗವಾಯಿಗಳವರ ಭಾವಚಿತ್ರ ಇರುವ ಬೆಳ್ಳಿ ರಥದ ಮೆರವಣಿಗೆಯು ಕುಷ್ಟಗಿ ತಾಲೂಕಿ ತಾವರಗೇರಿಯ ಭೋಗಾಪುರದಿಂದ ಪ್ರಾರಂಭಗೊಂಡು ರಥೋತ್ಸವ

ಕುಷ್ಟಗಿ ಮಾರ್ಗವಾಗಿ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿತು

ಪಟ್ಟಣದ ಬಂಡಿ ರಸ್ತೆ ಮುಖಾಂತರ ಆಗಮಿಸಿದ ಪುಟ್ಟರಾಜ ಗವಾಯಿಗಳ ಭಾವಚಿತ್ರವನ್ನು ಹೊಂದಿರುವ ಬೆಳ್ಳಿರಥದ ಮೆರವಣಿಗೆಯನ್ನು ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಪ್ರಾರಂಭವಾಗಿ ಕನಕದಾಸರು ವೃತ್ತ ಬಿ.ಆರ್.ಅಂಬೇಡ್ಕರ್ ವೃತ್ತ ಪುನೀತ್ ರಾಜಕುಮಾರ ವೃತ್ತ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಮುಧೋಳ ರಸ್ತೆ ಮೂಲಕ ಬಾಬು ಜಗಜೀವನ ರಾಮ್ ವೃತ್ತದವರೆಗೂ ಮೆರವಣಿಗೆ ನಡೆಯಿತು. ನಂತರ ಮುಧೋಳ ಗ್ರಾಮದ ಭಕ್ತಾದಿಗಳು ಆಗಮಿಸಿ ಅವರ ಜೊತೆಗೂಡಿ ಮೆರವಣಿಗೆ ಮುಂದೆ ಸಾಗಿಸಿದರು.

ಭಾವಚಿತ್ರ ಮೆರವಣಿಗೆ ಕಾರ್ಯಕ್ರಮದಲ್ಲಿ ಯಲಬುರ್ಗಾ ಪಟ್ಟಣ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಅಂಬರೀಶ್ ಹುಬ್ಬಳ್ಳಿ ನಿಕಟಪೂರ್ವ ಸ್ಥಾಯಿಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ ಸದಸ್ಯರುಗಳಾದ ರೇವಣಪ್ಪ

ಹಿರೇ ಕುರುಬರ ವರ್ತಕ ಸಂಗಣ್ಣ ತೆಂಗಿನಕಾಯಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಸುರೇಶ್ ಗೌಡ ಶಿವನಗೌಡ ಮಂಜುನಾಥ್‌ ಪತಂಗರಾಯ ಮಲ್ಲಿಕಾರ್ಜುನ್‌ ಡುಮ್ಮಣ್ಣವರ ವೃತ್ತಿ ರಂಗಭೂಮಿ ಕಲಾವಿದರಾದ ಶಂಕ್ರಪ್ಪ ಹಿರೇಅರಳಿಹಳ್ಳಿ ಮಮತಾ ಹಾಗೂ ಕುಮಾರ

ಹಿರೇಅರಳಿಹಳ್ಳಿ ಕುಮಾರ ಚಿನ್ನವಾಲರ ಶರಣಪ್ಪ ದಾನಕ್ಕೆ ಶಂಕರ ಉಳ್ಳಾಗಡ್ಡಿ, ಷಣ್ಮುಖಪ್ಪ ರಾಂಪುರ, ನೂರುದ್ದೀನ್ ಮಕಾಂದರ, ಶಿವಾನಂದ ಬಣಕಾರ ಸೇರಿದಂತೆ ಮತ್ತೀತರರು ಉಪಸ್ತೀತರಿದ್ದರು,

 

Leave A Reply

Your email address will not be published.