ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರವನ್ನು ಫಲಾನುಭವಿಗೆ ನೀಡಿದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರದಾರ.
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಯಲಬುರ್ಗಾ:
ಪ್ರತಿ ಮಹಿಳೆಯರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಯಾವುದೇ ಗೊದಲಕ್ಕೆ ಒಳಗಾಗದೆ ಅರ್ಜಿ ಸಲ್ಲಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಸಂತೋಷ ಬಿರದಾರ ಪಾಟೀಲ್ ಹೇಳಿದರು.
ತಾಲೂಕಿನ ಕಲ್ಲೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮುಂಜೂರಾತಿ ಪತ್ರ ನೀಡಿ ಮಾತನಾಡಿದ ಅವರು ಯಲಬುರ್ಗಾ ಹಾಗೂ ಕುಕನೂರ ತಾಲೂಕಿನಲ್ಲಿ 66.517 ಕುಟುಂಬಗಳಿವೆ ಪ್ರತಿ ಫಲಾನುಭವಿಗಳಿಗೆ ಈ ಯೋಜನೆಯ ಅನುಕೂಲ ದೊರೆಯುತ್ತದೆ ಕುಟುಂಬದ ಯಜಮಾನಿಗೆ ಮಾಸಿಕ 2000 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವದು ಯಾರು ಗೊಂದಲಕ್ಕೆ ಒಳಗಾಗಬಾರದು ಆಧಾರ ಕಾರ್ಡ ಕೊಟ್ಟನಂತರ ನಿಮ್ಮ ಮೊಬೈಲ್ ನಂಬರಿಗೆ ಸಂದೇಶ ಕಳಿಸಲಾಗುವದು ಸಂದೇಶ ಬಂದ ನಂತರ ಪಲಾನುಭವಿಗಳು ನಿಗದಿ ಪಡಿಸಿದ ದಿನಾಂಕ ಸಮಯಕ್ಕೆ ಸರಿಯಾಗಿ ಗ್ರಾಮ ಒನ್, ಕರ್ನಾಟಕ ಒನ್, ಭಾಪೂಜಿ ಸೇವಾ ಕೇಂದ್ರಕ್ಕೆ ಬೇಟಿ ನೀಡಿ ಅರ್ಜಿ ಸಲ್ಲಿಸಬೇಕು ಸರಕಾರ ಕೊಡುವ ಸಹಾಯ ಧನವನ್ನು ತಮ್ಮ ಗೃಹ ಬಳಕೆಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧೂ ಏಲಿಗಾರ ಮಾತನಾಡಿ ಫಲಾನುಭವಿಗಳ ಮಾಹಿತಿಗೆ ಗ್ರಾಮದಲ್ಲಿ ಸ್ವಯಂ ಸೇವಕರನ್ನ ನೇಮಕ ಮಾಡಲಾಗುವದು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಹಾವಳಿಗೆ ಯಾರು ಬಲಿಯಾಗಬಾರದು ಮದ್ಯವರ್ತಿಗಳ ಹಾವಳಿ ಕಂಡು ಬಂದಲ್ಲಿ ಶಿಸ್ತು ಕ್ರಮ
ಕೈ ಗೋಳಲಾಗುವದು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ಜಾತಿ, ಧರ್ಮ ಭೇದ ಭಾವ ವಿಲ್ಲದೇ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು,
ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ರೇಣುಕಾ ,ಫಲಾನುಭವಿಗಳಾದ ಜಯಮ್ಮ, ಈರಮ್ಮ, ಶರಣಮ್ಮ ನೂರಸಾಬ ಹಾಗೂ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು,