ಹಿರೇವಂಕಲಕುಂಟಾದಿಂದ ಹುಬ್ಬಳ್ಳಿಗೆ ನೂತನ ಬಸ್ ಪ್ರಾರಂಭ : ಸಿಹಿ ಹಂಚಿ ಸಂಭ್ರಮಿಸಿದ ಗ್ರಾಮಸ್ಥರು
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಯಲಬುರ್ಗಾ :
ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಿಂದ ಹುಬ್ಬಳ್ಳಿ ನಗರಕ್ಕೆ ಕೆ.ಎಸ್.ಆರ್.ಟಿ ಸಿ ನೂತನವಾಗಿ ಎರಡು ಬಸ್ ಆರಂಭಿಸಿರುವುದರ ಪ್ರಯುಕ್ತ ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ನೂತನ ಬಸ್ಸು ಬೆಳಗ್ಗೆ 6 ಗಂಟೆಗೆ ಹಿರೇವಂಕಲಕುಂಟಾದಿಂದ ಹುಬ್ಬಳ್ಳಿಗೆ ಹೊರಡಲಿದೆ, ಸಂಜೆ 7 ಗಂಟೆಗೆ ಹುಬ್ಬಳ್ಳಿ ನಗರದಿಂದ ಮತ್ತೆ ವಾಪಸ್ ಬಿಡಲಿದೆ. ಮತ್ತೊಂದು ಬಸ್ಸು ಗಾಣದಾಳ ಗ್ರಾಮದಿಂದ ಕನಕಗಿರಿಗೆ ತಲುಪಿ, ಅಲ್ಲಿಂದ ಹಿರೇವಡ್ರಕಲ್ ಹುಚ್ಚಲಕುಂಟಾ, ಹಿರೇವಂಕಲಕುಂಟಾ ಬಂದು ತಲುಪಿ, ಅಲ್ಲಿಂದ ಮದ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣಿಸಲಿದೆ.
ನೂತನ ಬಸ್ಸು ಹುಬ್ಬಳ್ಳಿಗೆ ಪ್ರಯಾಣಿಸುವ ಸುದ್ದಿ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ನೂತನ ಬಸ್ಸುಗಳಿಗೆ ಹಾರ ಹಾಕಿ, ಪೂಜೆ ಸಲ್ಲಿಸಿ ಶುಭಾಶಯ ಕೋರಿ ಹರ್ಷ ವ್ಯಕ್ತಪಡಿಸಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಡ್ರೈವರ್, ಕಂಡಕ್ಟರ್ ಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ರಾಯರೆಡ್ಡಿಯವರನ್ನ ಹಾಗೂ ಕೆ.ಎಸ್.ಆರ್.ಟಿ ಸಿ ವ್ಯವಸ್ಥಾಪಕರಾದ ರಮೇಶ್ ಚಿಣಗಿಯವರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ವೇಳೆ ಮಾಜಿ ಗ್ರಾಪಂ ಅಧ್ಯಕ್ಷ ಮಂಜುನಾಥ ಸಜ್ಜನ, ಯುವಮುಖಂಡರಾದ ಹನಮೇಶ ಚಿಣಗಿ, ಗಣೇಶ ಪೋಪಳೆ, ಹನುಮೇಶ ಭಜಂತ್ರಿ, ವಿರುಪಾಕ್ಷ ಗಡಾಶೆಟ್ಟರ, ಕಾಸೀಮ್ ಗುಬ್ಬಿ, ಮಂಜುನಾಥ ಡಗ್ಗಿ, ಪ್ರಕಾಶ ರಾಟಿ, ರವಿ ಭಜಂತ್ರಿ, ಹನುಮೇಶ ಕಂಬಳಿ, ಮುದಿಯಪ್ಪ ಸಜ್ಜನ, ಗಣೇಶ ಸಜ್ಜನ, ಯಮನೂರಪ್ಪ ತರಲಕಟ್ಟಿ ಸೇರಿದಂತೆ ಗ್ರಾಮದ ಹಿರಿಯರು ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಇದ್ದರು.
ಬಸವರಾಜ ಎನ್ ಬೋದೂರು
ವರದಿ : ಕೊಪ್ಪಳ