ಕಿಸಾನ್ ಸಮ್ಮಾನ್ ನಿಧಿ: ಜೂನ್ 30ರೊಳಗೆ ಇ-ಕೆವೈಸಿ ಮಾಡಿಸಲು ಸೂಚನೆ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇ-ಕೆವೈಸಿ ಮಾಡಿಸದ ಕೊಪ್ಪಳ ತಾಲೂಕಿನ ರೈತರು ಜೂನ್ 30ರೊಳಗೆ ಇ-ಕೆವೈಸಿ ಮಾಡಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ರೈತರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯ 14ನೇ ಕಂತಿನ ಹಣ ಜುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಇದರ ವರ್ಗಾವಣೆ ಇ-ಕೆವೈಸಿ ಮಾಡುತ್ತಿರುವ ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಬರುತ್ತದೆ.
ಕೊಪ್ಪಳ, ಅಳವಂಡಿ, ಇರಕಲ್ಲಗಡ ಹಾಗೂ ಹುಲಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ 9455 ರೈತರ ಇ-ಕೆವೈಸಿ ಬಾಕಿ ಇರುತ್ತದೆ. ರಾಜ್ಯ ಸರ್ಕಾರ ಮುಖ ದೃಢೀಕರಣ ಘೋಷಿಸಿದೊಂದಿಗೆ “ಫೇಸ್ ಆಥೇಂಟಿಕೇಷನ್ ಆಫ್ ಇ-ಕೆವೈಸಿ” ಪಿ.ಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ರೈತರು ಈ ಅಪ್ಲಿಕೇಶನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿ ಇ-ಕೆವೈಸಿ ಮಾಡಿಕೊಳ್ಳಬಹುದು. ಇತರೆ ರೈತರಿಗೂ ಇ-ಕೆವೈಸಿ ಮಾಡಿಸಲು ಸಹಾಯ ಮಾಡಬಹುದು. ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸೇವಾ ಸಿಂಧು ಸೆಂಟರ್‌ಗಳಿಗೆ ಭೇಟಿ ನೀಡಿ ಅಗತ್ಯ ಸೇವೆ ಪಡೆಯಬಹುದು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
All reactions:
2