ಡಿ ಡಿ ನ್ಯೂಸ್. ಕನಕಗಿರಿ
ನೀತಿ ಸಂಹಿತೆ ಉಲ್ಲಂಘಿಸಿ ಕನಕಗಿರಿ ತಾಲೂಕಿನ ಗೌರಿಪುರದ ಮನೆಯೊಂದರಲ್ಲಿ ಅಕ್ರಮವಾಗಿ ಇಟ್ಟಿದ ಮದ್ಯವನ್ನು ಮಾದರಿ ನೀತಿ ಸಂಹಿತೆ ತಂಡವು ಏಪ್ರಿಲ್ 26ರಂದು ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಗೌರಿಪುರದಲ್ಲಿ ಅಕ್ರಮ ಮದ್ಯ ಶೇಖರಿಸಿಡಲಾಗಿದೆ ಎನ್ನುವ ಮಾಹಿತಿ ಮೇರೆಗೆ ಕನಕಗಿರಿ ತಾಲೂಕು ಎಂಸಿಸಿ ನೋಡಲ್ ಅಧಿಕಾರಿಗಳಾದ ಚಂದ್ರಶೇಖರ್ ಕಂದಕೂರ್ ಅವರ ನೇತೃತ್ವದ ತಂಡವು ದಾಳಿ ಮಾಡಿದೆ. ಈ ವೇಳೆ ಐದು ಬಾಕ್ಸ್ ಓರಿಜಿನಲ್ ಚಾಯಿಸ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ದಾಳಿ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳಾದ ವಿಠ್ಠಲ್, ವಿಜಯಕುಮಾರ್ ರೆಡ್ಡಿ, ಫೈಯ್ಲಿಂಗ್ ಸ್ಕ್ವಾಡ್ ತಂಡದ ಶರಣಪ್ಪ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಕಳೆದ ಮೂರ್ನಾಲ್ಕು ದಿನಗಳಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದಾದ್ಯಂತ ಬಾರ್, ರೆಸ್ಟೋರೆಂಟ್ ಹಾಗೂ ಡಾಬಾಗಳ ಮೇಲೆ ಎಂಸಿಸಿ ತಂಡವು ನಿಗಾವಹಿಸಿದೆ. ತಾಲೂಕಿನ ಮುಸಲಾಪುರ ಹಾಗೂ ಕನಕಗಿರಿ ಪಟ್ಟಣದ ಹಲವು ಬಾರ್ ಮತ್ತು ರೆಸ್ಟೋರೆಂಟ್, ಡಾಬಾಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಪ್ರಕರಣಗಳು ಕಂಡುಬAದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಂಸಿಸಿ ಕನಕಗಿರಿ ತಾಲೂಕು ನೋಡಲ್ ಅಧಿಕಾರಿಗಳಾದ ಚಂದ್ರಶೇಖರ ಕಂದಕೂರ ಅವರು ಪ್ರತಿಕ್ರಿಯಿಸಿದ್ದಾರೆ.