ಡಿ ಡಿ ನ್ಯೂಸ್. ಕೊಪ್ಪಳ
ಹುಲಿಗಿ ಗ್ರಾಮದಲ್ಲಿ ೩ನೇ ವಾರ್ಡಿನ ರಾಜಬೀದಿಯಲ್ಲಿ ಕಳೆದ ಒಂದು ವರ್ಷದಿಂದ ನಿಲ್ಲಿಸಲಾದ ಪಿಡಬ್ಲೂಡಿ ಚರಂಡಿ ಕಾಮಗಾರಿಯನ್ನು ಈಗ ಚುನಾವಣೆ ಸಮೀಪವಿರುವಾಗ ಏಕಾಏಕಿ ಪ್ರಾರಂಬಿಸಿರುವದರ ಹಿಂದೆ ರಾಜಕಾರಣಿಗಳ ಮತದ ಉದ್ದೇಶವಿದೆ ಈಗಾಗಿ ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ಚುನಾವಣೆ ನಂತರ ಪ್ರಾರಂಭಿಸುವತೆ ಸಾರ್ವನಿಕರು ಒತ್ತಾಯಿಸಿದ್ದಾರೆ.
ಈ ಕಾಮಗಾರಿಯನ್ನು ಒಂದು ವರ್ಷದ ಹಿಂದೆ ಅರ್ಧಮರ್ಧ ಕೈಗೊಂಡು ಸಾಮಗ್ರಿಗಳು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದರು ಈಗ ಕಾಮಗಾರಿಯನ್ನು ಏಕಾಏಕಿ ಆರಂಭವಾಗಿರುವುದು ಅನುಮಾನ ಉಂಟು ಮಾಡಿದೆ, ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಈ ಹಿಂದೆ ಗ್ರಾಮಪಂಚಾಯಿತಿ ,ಸಂಬಧಿಸಿದವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಈ ಚರಂಡಿ ಪಕ್ಕದ ರಸ್ತೆಯ ಮೂಲಕ ಶ್ರೀಹುಲಿಗೆಮ್ಮದೇವಿಯ ಜ್ಯೋತಿಕೆ, ಪೂಜಾಸಾಮಗ್ರಿಗಳು, ದಸರಾ ವೇಳೆ ಸಹ, ಮೊಹರಂ ಈ ರಸ್ತೆಯ ಮೂಲಕ ಸಾರ್ವಜನಿಕರು ಸಾಗುತ್ತಾರೆ ಎಷ್ಟೋ ಬಾರಿ ಚಿಕ್ಕ ಮಕ್ಕಳು, ವಯಸ್ಸಾದ ಮುದುಕರು ಈ ಚರಂಡಿಯಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆಗಳು ಇವೆ,ಈಗ ಚುನಾವಣೆ ಹತ್ತಿರವಿರುವಾಗ ಕಾಮಗಾರಿ ಆರಂವಾಗಿದ್ದು ರಾಜಕಾರಣಿಗಳು ಮತ ಪಡೆಯುವ ಉದ್ದೇಶ ಕಾಣುವಂತೆ ಇದ್ದು ಕೂಡಲೇ ನಿಲ್ಲಿಸಿ ಚುನಾವಣೆಯ ನಂತರ ಪ್ರಾರಂಭಿಸುವತೆ ಬಿಜೆಪಿ ಮುಖಂಡ ಫಾಲಾಕ್ಷಪ್ಪ ಗುಂಗಾಡಿ, ಯೋಗರಾಜ ಈಡಿಗೇರ, ಗವಿಸಿದ್ದಪ್ಪ ಅವರು ಚುನಾವಣೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಪೂರ್ವದಲ್ಲಿ ಕಾಮಗಾರಿ ಅನುಮೋದನೆಗೊಂಡಿದ್ದು ಕಾರಣ ಸದರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗ್ರಾ.ಪಂ ಪಿಡಿಓ ಪರಮೇಶ್ವರಯ್ಯ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಚರಂಡಿ ಕಾಮಗಾರಿ ಏಕಾಏಕಿ ಪ್ರಾರಂಭದ ಹಿಂದೆ ರಾಜಕೀಯವಿದ್ದು ಕೂಡಲೇ ಸಂಬಧಿಸಿದವರು ಗಮನಹರಿಸಿ ಈ ಕಾಮಗಾರಿ ನಿಲ್ಲಿಸಿ ಚುನಾವಣೆ ನಂತರ ಪ್ರಾರಂಭ ಮಾಡಲು ಸೂಚನೆ ನೀಡಲು ಹುಲಿಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.