ಡಿ ಡಿ ನ್ಯೂಸ್. ಯಲಬುರ್ಗಾ:
ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪತ್ರಕರ್ತರು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ವಿರೋಧ ಪಕ್ಷ ಮಾಡವ ಕೆಲಸವನ್ನು ಅಂಕಣಕಾರರು, ಪತ್ರಕರ್ತರು ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕೆಲ ಸಂದರ್ಭದಲ್ಲಿ ಸರ್ಕಾರವನ್ನು ಬೀಳಿಸಿದಂತ ಕೀರ್ತಿ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ಸಲ್ಲುತ್ತದೆ. ಪತ್ರಿಕೆಯ ಪಾತ್ರ ತುಂಬಾ ಮಹತ್ವದ್ದಾಗಿದೆ. ನೀತಿ ಸಂಹಿತೆ ಯನ್ನು ಅಳವಡಿಸಿಕೊಂಡು ನಿಷ್ಪಕ್ಷಪಾತ ವಾಗಿ ಕೆಲಸ ಮಾಡುವ ಕೆಲಸ ವಾಗಬೇಕಾಗಿದೆ. ರಾಜಕೀಯ , ನ್ಯಾಯಾಂಗ, ಪತ್ರಿಕಾಂಗ ಸೇರಿದಂತೆ ಎಲ್ಲಾ ರಂಗದಲ್ಲೂ ಮೌಲ್ಯಗಳು ಕುಸಿದಿವೆ. ಈ ಕಾರಣದಿಂದ ಪತ್ರಕರ್ತರು ಮೌಲ್ಯಗಳನ್ನು ಅಳವಡಿಸಿಕೊಂಡು ನೊಂದವರ ಧ್ವನಿಯಾಗಬೇಕು ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಜಿ.ಎಸ್.ಗೋನಾಳ, ರಾಜ್ಯ ಕಾರ್ಯಕಾರಣಿ ಸದಸ್ಯ ಎಂ.ಸಾಧಿಕ ಅಲಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಮಲ್ಲು ಮಾಟರಂಗಿ ಪ್ರಸ್ತಾವಿಕ ಮಾತನಾಡಿದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಪಪಂ ಮುಖ್ಯಾಧಿಕಾರಿ ನಾಗೇಶ, ಗ್ರೇಡ್-2 ತಹಶಿಲ್ದಾರ ನಾಗಪ್ಪ ಸಜ್ಜನ, ಎನ್ ಪಿಎಸ್ ನೌಕರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಭಾರ ಬಿಇಒ ಅಶೋಕ ಪಾಟೀಲ್, ಹಿರಿಯ ಪತ್ರಕರ್ತ ಮೌಲಾಹುಸೇನ್ ಬುಲ್ಡಿಯಾರ, ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಮಂಜುನಾಥ ಕೋಳೂರ, ಅರಣ್ಯ ಇಲಾಖೆಯ ಶರೀಫ್ ಕೋತ್ವಾಲ್, ಕಾಲೇಜಿನ ಪ್ರಾಚಾರ್ಯ ಶಿವಪ್ಪ ಬೇಲೆರಿ, ಮುಖಂಡರಾದ ಶಿವನಗೌಡ ದಾನರೆಡ್ಡಿ, ಸುಧೀರ ಕೊರ್ಲಹಳ್ಳಿ ಸೇರಿದಂತೆ ಇತರರಿದ್ದರು.