ಬೇವೂರ ಗ್ರಾ.ಪಂ. ಅಧ್ಯಕ್ಷೆಯಾಗಿ ಅಂದಮ್ಮ ಗವಿಸಿದ್ದಪ್ಪ ಬಳಿಗಾರ ಅವಿರೋಧ ಆಯ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಲಕ್ಷ್ಮವ್ವ ಚುಕ್ಕಾಡಿ ಆಯ್ಕೆ.
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಯಲಬುರ್ಗಾ :
ತಾಲ್ಲೂಕಿನ ಬೇವೂರು ಗ್ರಾ.ಪಂ. ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಅಂದಮ್ಮ ಗವಿಸಿದ್ದಪ್ಪ ಬಳಿಗಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ,ಕೆ,ಬಡಿಗೇರ ತಿಳಿಸಿದ್ದಾರೆ
30 ತಿಂಗಳ ಅವದಿ ಮುಕ್ತಾಯವಾಗಿ ಪುನಹ 30 ತಿಂಗಳ ಅವದಿಗೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಹಿಂದುಳಿದ ಬ ವರ್ಗಕ್ಕೆ ಮೀಸಲಾದ ಹಿನ್ನಲೆಯಲ್ಲಿ 20 ಜನ ಸದಸ್ಯರಲ್ಲಿ ಇವರೊಬ್ಬರೆ ಏಕೈಕ ಸದಸ್ಯೆಯಾಗಿರುವದರಿಂದ ಹಿಂದುಳಿದ ಬ ವರ್ಗ ಬಿಜೆಪಿ ಬೆಂಬಲಿತ ಒಬ್ಬರೇ ಸದಸ್ಯರಾಗಿರುವದರಿಂದ ಅವಿರೋಧವಾಗಿ ಆಯ್ಕೆಯಾದರು
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗೀತು ಬಸವಣೆವ್ವ ಮಲ್ಲಪ್ಪ ಭಾವಿಕಟ್ಟಿ ಹಾಗೂ ಲಕ್ಷ್ಮವ್ವ ನೀಲಪ್ಪ ಚುಕ್ಕಾಡಿ ಮಧ್ಯ ಚುನಾವಣೆ ಜರುಗೀತು,ಬಸವಣ್ಣೆವ್ವ ಮಲ್ಲಪ್ಪ ಭಾವಿಕಟ್ಟಿ 8 ಮತಗಳನ್ನ ಪಡೆದರೆ ಲಕ್ಷ್ಮವ್ವ ನೀಲಪ್ಪ ಚುಕ್ಕಾಡಿ 12 ಮತಗಳನ್ನ ಪಡೆದಿರುವದರಿಂದ ಲಕ್ಷ್ಮವ್ವ ನೀಲಪ್ಪ ಚುಕ್ಕಾಡಿ ಉಪಾಧ್ಯಕ್ಷರಾಗಿ ಆಯ್ಕೆ ಯಾದರೆಂದು ಚುನಾವಣಾಧಿಕಾರಿ ವಿ,ಕೆ,ಬಡಿಗೇರ ತಿಳಿಸಿದ್ದಾರೆ.
ಅಂದಮ್ಮ ಗವಿಸಿದ್ದಪ್ಪ ಬಳಿಗೇರ ಮಾತನಾಡಿ,‘ಸರ್ಕಾರದ ಸವಲತ್ತುಗಳನ್ನು ಗ್ರಾ.ಪಂ. ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿಗೆ ಎಲ್ಲಾ ಸದಸ್ಯರ ಜೊತೆಗೂಡಿ ಶ್ರಮಿಸುತ್ತೇನೆ’ ಎಂದರು. ಗ್ರಾಮಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಶಂಕರ ರಾವ್ ದೇಸಾಯಿ .ತಾಲೂಕ ಪಂಚಾಯತ ಮಾಜಿ ಸದಸ್ಯ ಶಂಕರಗೌಡ ಟಣಕನಕಲ್ಲ,ನಿಂಗಜ್ಜ ಬೇವೂರ,ದೇವೇಂದ್ರಪ್ಪ ತಳವಾರ ಸಿದ್ದು ಮಣ್ಣಿನವರ,ಈಶ್ವರ ತಲ್ಲೂರು,ಮಹೇಶ ಜಾಲಿಹಾಳ ಬುಡ್ಡಪ್ಪ ಸರಿಸಂಗಪ್ಪನವರ,ಶರಣಪ್ಪ ಟಣಕನಕಲ್,ದ್ಯಾಮಣ್ಣ ಗೊಂದಿ,ಮರಿಸ್ವಾಮಿ ಮಣ್ಣಿನವರ,ಶರಣಪ್ಪ ಬಳಿಗಾರ ಸೇರಿದಂತೆ ಮತ್ತೀತರರು ವಿಜಯೋತ್ಸವ ಆಚರಿಸಿ ಸಂಬ್ರಮಿಸಿದರು,