ಹುಲಿಗೆಮ್ಮನ ಸನ್ನಿಧಾನಕ್ಕೆ ಬಂದು ಆರೋಪ ಮಾಡಲಿ: ಸಂಗಣ್ಣ
ಡಿ ಡಿ ನ್ಯೂಸ್. ಕೊಪ್ಪಳ
ನಾನು ಬ್ಲಾಕ್ ಮೇಲ್ ಮಾಡಿ ಟಿಕೆಟ್ ತಂದಿದ್ದರೆ, ಹುಲಿಗೆಮ್ಮನ ಸನ್ನಿಧಾನಕ್ಕೆ ಬಂದು ಹೇಳಲಿ. ಏನಾನಾದರು ಇದ್ದರೆ ಅಲ್ಲಿ ಬಂದು ಹೇಳಲಿ ಎಂದು ಸಂಸದ ಕರಡಿ ಸಂಗಣ್ಣ ಅವರು ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ಗೆ ಸವಾಲು ಹಾಕಿದರು.
ಕೊಪ್ಪಳ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಸಿ.ವಿ.ಚಂದ್ರಶೇಖರ್ ಸುಖಾ ಸುಮ್ಮನೆ ಅಪಪ್ರಚಾರ ಮಾಡುವುದು ಸರಿಯಲ್ಲ. ಹುಲಿಗೆಮ್ಮ ಸನ್ನಿಧಾನಕ್ಕೆ ಬಂದು ಮಾತನಾಡಲಿ. ತಪ್ಪಿದ್ದರೆ, ನನಗಾದರೂ ಶಿಕ್ಷೆಯಾಗಲಿ. ಅವನಿಗಾದರೂ ಶಿಕ್ಷೆಯಾಗಲಿ
ದುಡ್ಡು ಕೊಳ್ಳೆ ಹೊಡೆದು ರಾಜಕಾರಣ ಮಾಡುತ್ತಿದ್ದಾರೆ. ಇದು ಬಹಳಷ್ಟು ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲೆಯ ಶಾಸಕರು ಹಾಗೂ ನಾಯಕರು ವರಿಷ್ಠರ ಮುಂದೆ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಿ. ಅವರು ಸ್ಪರ್ಧೆ ಮಾಡಿದರೆ ಐದು ಕ್ಷೇತ್ರ ಗೆಲ್ಲಿಸಿಕೊಂಡು ಬರಲಿದ್ದಾರೆ ಎಂದಿದ್ದರು. ಸಂಸದರಿಗೆ ಟಿಕೆಟ್ ಕೊಟ್ಟರೆ ಆರು ತಿಂಗಳಲ್ಲಿ ಉಪಚುನಾವಣೆ ಮಾಡಬೇಕಾಗುತ್ತದೆ. ಆದ್ದರಿಂದ
ವರಿಷ್ಠರು ಸಂಸದರಿಗೆ ಕೊಡಬಾರದು ಎಂದು ತೀರ್ಮಾನಿಸಿದ್ದರು ಎಂದು ತಿಳಿಸಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಪಂಚಮಸಾಲಿ ಸಮುದಾಯದ ವ್ಯಕ್ತಿ ಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರು ತೀರ್ಮಾನ ಮಾಡಿದ್ದರು. ರೆಡ್ಡಿ ಸಮಾಜಕ್ಕೆ ಯಲಬುರ್ಗಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಕೊಡಲೇ ಬೇಕಿದೆ.
ಆದ್ದರಿಂದ ಪಕ್ಷದ ಕೆಲಸ ಮಾಡು ಎಂದು ಸಿ.ವಿ.ಚಂದ್ರಶೇಖರ್ ಅವರಿಗೆ ವರಿಷ್ಠರು ಹೇಳಿದ್ದರು. ನಮಗೂ ಗೊತ್ತಿರಲಿಲ್ಲ ಮಂಜುಳಾ ಅಮರೇಶ ಕರಡಿಗೆ ಟಿಕೆಟ್ ನೀಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಸೇರಿ ಮತ್ತಿತರರಿದ್ದರು.
ಲೂಟಿ ಹೊಡೆದ ಸಿವಿಸಿ:
ಸಿವಿಸಿ ಕೊಪ್ಪಳಕ್ಕೆ ಬಂದು ನನ್ನ ಶಕ್ತಿ ಉಪಯೋಗಿಸಿದ್ದರೆ ನನ್ನ ಮನೆಗೆ ಟಿಕೆಟ್ ಬರುತ್ತಿತ್ತು ಎಂದು ಹೇಳಿಕೆ ನೀಡಿದ್ದಾನೆ. ಆತನ ಆಸ್ತಿ ಒಂದು ಸಾವಿರ ಕೋಟಿ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡಿ ವ್ಯಕ್ತಿ ಅಷ್ಟು ಹೇಗೆ ಸಂಪಾದಿಸಿದ? ತಿಂಗಳಿಗೆ 18 ರಿಂದ 50 ಸಾವಿರ ವೇತನ ಇರಬಹುದು. 30 ವರ್ಷಕ್ಕೆ ಎಷ್ಟಾಗುತ್ತದೆ? ಇವರು ಲೂಟಿ ಹೊಡೆದು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಸಿವಿಸಿ ವಿರುದ್ಧ ಕಿಡಿಕಾರಿದರು.