deshadoothanews

ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಗೆ ಆದ್ಯತೆ – ಬಿಜೆಪಿಯಿಂದ ಹಳ್ಳಿಗಳಲ್ಲಿ ಅಬ್ಬರದ ಪ್ರಚಾರ – ಜನಸ್ತೋಮದ ಮಧ್ಯೆ ಬಿಜೆಪಿ ಪರ ಮತಯಾಚನೆ

ಡಿ ಡಿ ನ್ಯೂಸ್. ಕೊಪ್ಪಳ

0

ಧೂಳು ಮುಕ್ತ ಕೊಪ್ಪಳ ನನ್ನ ಗುರಿ: ಸಂಗಣ್ಣ

ಡಿ ಡಿ ನ್ಯೂಸ್. ಕೊಪ್ಪಳ

ಕಾರ್ಖಾನೆಗಳಿಂದ ಬರುವ ಅಶುದ್ಧ ಗಾಳಿಯಿಂದ ಮನುಷ್ಯನ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಭಾರೀ ವಾಹನಗಳ ಓಡಾಟದಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ಧೂಳು ಮುಕ್ತ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಹೀರೆಕಾಸನಕಂಡಿ, ಹೀರೆಬಗನಾಳ, ಚಿಕ್ಕ ಬಗನಾಳ, ಕರ್ಕಿಹಳ್ಳಿ, ಲಾಚನಕೇರಿ, ಕುಣಕೇರಿ, ಬೆಳವಿನಾಳ ಗ್ರಾಮಗಳಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಚುನಾವಣೆ ಪ್ರಚಾರ ನಡೆಸಿದ ಮಾತನಾಡಿದರು.

ಕಾರ್ಖಾನೆಗಳ ಕಲುಷಿತ ಗಾಳಿಯಿಂದ ಮನುಷ್ಯ ಮಾತ್ರವಲ್ಲದೇ ರೈತರ ಬೆಳೆಗಳಿಗೆ ತೊಂದರೆ ಆಗುತ್ತಿದೆ. ಧೂಳು ಬೆಳೆ ಮೇಲೆ ಕುಳಿತು ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬರುತ್ತಿಲ್ಲ. ಗ್ರಾಮೀಣ ಪ್ರದೇಶಗಳು ಧೂಳಿನಿಂದ ಆವರಿಸಿಕೊಂಡಿವೆ. ಈ ಧೂಳಿಗೆ ಮುಕ್ತಿ ನೀಡಬೇಕಾದರೆ, ಜನರು ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿ ಗೆಲ್ಲಿಸಬೇಕು ಎಂದರು.

ಕಾರ್ಖಾನೆಗಳಿಗೆ ಸಂಬಂಧಿಸಿದ ಭಾರೀ ಗ್ರಾತದ ವಾಹನಗಳು ಗ್ರಾಮೀಣ ಸೇರಿ ನಗರ ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ರಸ್ತೆ ದುರಸ್ತಿಗೆ ನೂರಾರು ಕೋಟಿ ರೂ. ಬೇಕಿದೆ. ಮಹಿಳಾ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರನ್ನು ಗೆಲ್ಲಿಸಿ ವಿಧಾನಸಭೆ ಗೆ ಕಳುಹಿಸಿದರೆ, ರಸ್ತೆ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸುವುದು ಬಿಜೆಪಿ ಸರ್ಕಾರದ ಆದ್ಯತೆ ಯಾಗಿದೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಮಾತನಾಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಮಳೆ ಬಂದರೆ ರಸ್ತೆಯಲ್ಲ ಕೆಸರುಮಯವಾಗಲಿವೆ. ಇದೇ ರಸ್ತೆಯಲ್ಲಿ ಜನಸಂಚಾರ ತೊಂದರೆಯಾಗಿದೆ. ಕಾಂಗ್ರೆಸ್ ಶಾಸಕರು ಚುನಾವಣೆ ವೇಳೆ ಗ್ರಾಮೀಣ ಭಾಗದ ಕಡೆ ಮುಖ ಮಾಡುತ್ತಿರುವುದು ಜನರು ಗಮನಿಸಿದ್ದಾರೆ. ಆದ್ದರಿಂದಲೇ ಭಾಗಶಃ ಹಳ್ಳಿಯಲ್ಲಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆ ಅಭಿವೃದ್ಧಿ ನನ್ನ ಮೊದಲ ಆದ್ಯತೆ ಎಂದರು.

ಚುನಾವಣೆ ಪ್ರಚಾರದ ವೇಳೆ ಮತದಾರರು ತಮ್ಮ ಗ್ರಾಮಗಳ ಸಮಸ್ಯೆ ಗಳನ್ನು ತಿಳಿಸಿದ್ದಾರೆ. ತಮಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಗೆಲುವು ಸಿಕ್ಕ ತಕ್ಷಣವೇ ಪ್ರತಿಯೊಂದು ಗ್ರಾಮಗಳ ಸಮಸ್ಯೆ ಪರಿಹಾರಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

 

–ಬಾಕ್ಸ್–

ಬಿಜೆಪಿ ಮತ ಪ್ರಚಾರಕ್ಕೆ ಸಾವಿರಾರು ಜನರು ಭಾಗಿ:

ಹೀರೆಕಾಸನಕಂಡಿ, ಹೀರೆಬಗನಾಳ, ಚಿಕ್ಕ ಬಗನಾಳ, ಕರ್ಕಿಹಳ್ಳಿ, ಲಾಚನಕೇರಿ, ಕುಣಕೇರಿ, ಬೆಳವಿನಾಳ ಗ್ರಾಮದಲ್ಲಿ ನಡೆದ ಬಿಜೆಪಿ ಮತ ಪ್ರಚಾರದ ವೇಳೆ ಸಾವಿರಾರು ಜನರು ಭಾಗವಹಿಸಿದ್ದರು. ಸಂಸದ ಕರಡಿ ಸಂಗಣ್ಣ ಹಾಗೂ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಜತೆ ಜನರು ಹೆಜ್ಜೆ ಹಾಕಿ ಮತ ಪ್ರಚಾರ ನಡೆಸಿದರು. ಮನೆ – ಮನೆ ಭೇಟಿ ಹಾಗೂ ಬಹಿರಂಗ ಪ್ರಚಾರ ಸಭೆ ನಡೆಸುವ ಮೂಲಕ ಗ್ರಾಮಗಳ ಸಮಸ್ಯೆ ಗಳನ್ನು ಆಲಿಸಲಾಯಿತು. ಗ್ರಾಮಗಳ ಅಭಿವೃದ್ಧಿ ಬಗ್ಗೆ ಜನತೆಗೆ ಭರವಸೆ ನೀಡಿದರು. ದಿನದಿಂದ ದಿನಕ್ಕೆ ಪ್ರಚಾರದ ಸಭೆಯಲ್ಲಿ ಭಾಗವಹಿಸುವವರ ಸಂಖ್ಯೆ ಅಧಿಕವಾಗುತ್ತಿರುವುದು ಕಂಡು ಬಂದಿತು.

–ಕೋಟ್ಸ್–

ಗ್ರಾಮಗಳ ಅಭಿವೃದ್ಧಿ ಗೆ ಬಿಜೆಪಿ ನೀಡದ ಆದ್ಯತೆ ಯಾವ ಪಕ್ಷವೂ ನೀಡಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ಭಾರೀ ಅಂತರದಿಂದ ಗೆಲ್ಲಿಸಿ ಕಳುಹಿಸಿ ಗ್ರಾಮೀಣಾಭಿವೃದ್ಧಿ ಆಗಲಿದೆ. ಕೊಟ್ಟ ಭರವಸೆ ಈಡೇರಿಸುವವರೆಗೆ ವಿರಮಿಸುವುದಿಲ್ಲ.

– ಸಂಗಣ್ಣ ಕರಡಿ, ಸಂಸದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳು, ಶೌಚಾಲಯ, ಕುಡಿಯುವ ನೀರು ಸೇರಿ ಮೂಲಸೌಕರ್ಯ ವಂಚಿತವಾಗಿದೆ. ಬಿಜೆಪಿ ಮತ ನೀಡಿ ಗೆಲ್ಲಿಸಿ. ಎಲ್ಲ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು.

– ಮಂಜುಳಾ ಅಮರೇಶ ಕರಡಿ, ಬಿಜೆಪಿ ಅಭ್ಯರ್ಥಿ, ಕೊಪ್ಪಳ ವಿಧಾನಸಭಾ ಕ್ಷೇತ್ರ.

Leave A Reply

Your email address will not be published.