ತಾಳಕೇರಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ

Sweep awareness program at Talakeri canal dredging work site

ಡಿ. ಡಿ. ನ್ಯೂಸ್. ಯಲಬುರ್ಗಾ :

* ಮೇ 7 ರಂದು ಎಲ್ಲರೂ ಮತದಾನ ಮಾಡಿ: ಹನಮಂತಗೌಡ ಪೊಲೀಸ್ ಪಾಟೀಲ್ *

ಪ್ರಜಾಪ್ರಭುತ್ವದ ಹಬ್ಬವನ್ನು ನರೇಗಾ ಕೂಲಿಕಾರರು ಸಂಭ್ರಮದಿಂದ‌ ಆಚರಿಸಿ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ತಾಪಂ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.

ತಾಲೂಕಿನ ತಾಳಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಶೇಕಡಾ 2 ರಷ್ಟು ಹೆಚ್ಚಿನ ಮತದಾನವಾಗಿತ್ತು. ಅದರಂತೆ ಈ ಬಾರಿಯೂ ತಾಳಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಮತದಾನವಾಗಬೇಕು. ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಅಂದಿನ ದಿನ ನರೇಗಾ ಕೆಲಸಕ್ಕೆ ರಜೆ ನೀಡಲಾಗುವುದು ಎಂದು ತಿಳಿಸಿದರು.

ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒರಾದ‌ ರಾಮಣ್ಣ ದೊಡ್ಡಮನಿ ಮಾತನಾಡಿದರು. ತಾ.ಪಂ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ವಿಷಯ ನಿರ್ವಾಹಕರಾದ ಶೇಕಪ್ಪ ಉಪ್ಪಾರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಡಿಇಒ ಹನುಮಂತ, ಬಿಎಫ್ ಟಿ ಶ್ರೀಕಾಂತ ಸಜ್ಜನ್, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.

ತಾಲೂಕು ಐಇಸಿ ಸಂಯೋಜಕರು ಯಲಬುರ್ಗಾ

Karnataka ಕರ್ನಾಟಕState ರಾಜ್ಯ Koppal ಕೊಪ್ಪಳYelburga ಯಲಬುರ್ಗಾ
Comments (0)
Add Comment