ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಯಮನಪ್ಪ ಮಾಳಿ ‌ಉಪಾಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಶೀಲಿ ಆಯ್ಕೆ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್. ಯಲಬುರ್ಗಾ : ತಾಲೂಕಿನ ಮುರಡಿ ಗ್ರಾಮ ಪಂಚಾಯತ ಅಧ್ಯಕ್ಷ ‌ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಮನಪ್ಪ ಮಾಳಿ ಉಪಾಧ್ಯಕ್ಷರಾಗಿ ನೀಲವ್ವ ಶೀಲಿ ಆಯ್ಕೆಯಾಗಿದ್ದಾರೆ.

ಮುರಡಿ ಗ್ರಾಮ ಪಂಚಾಯತ‌ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯಲ್ಲಿ ಒಟ್ಟು 20 ಜನ ಸದಸ್ಯರ ಪೈಕಿ 17 ಜನ ಸದಸ್ಯರು ಚುನಾವಣೆ ಪ್ರಕ್ರೀಯೆಯಲ್ಲಿ ಪಾಲ್ಗೊಂಡಿದ್ದು 3 ಜನ ಸದಸ್ಯರು ಗೈರಾಗಿದ್ದಾರೆ ಪರಿಶಿಷ್ಟ ಜಾತಿಗೆ ಸೇರಿದ ಅಧ್ಯಕ್ಷ ‌ಸ್ಥಾನಕ್ಕೆ‌ ಯಮನಪ್ಪ ಮಾಳಿ ಮತ್ತು ಸಾಮಾನ್ಯ ಮಹಿಳಾ ಸ್ಥಾನಕ್ಕೆ ನೀಲವ್ವ ಹನಮಂತಪ್ಪ ಶೀಲಿ ತಲಾ ಒಂದೊಂದು ನಾಮಪತ್ರ‌ ಸಲ್ಲಿಸಿದರು .ಇವರಿಬ್ಬರನ್ನ ಒರತು ಪಡಿಸಿ ಹೆಚ್ಚು ನಾಮಪತ್ರಗಳು‌‌‌ ಸಲ್ಲಿಕೆ ಯಾಗದ‌ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಎಫ್,ಎಂ,ಕಳ್ಳಿ ತಿಳಿಸಿದ್ದಾರೆ.

ಮುಖಂಡರುಗಳಾದ ತೇಜನಗೌಡ ಪೋಲೀಸ್ ಪಾಟೀಲ್,ವೀರನಗೌಡ ಪೋಲೀಸ್ ಪಾಟೀಲ್,ಕಮಲಪ್ಪ ನಾಯಕ, ಗಿರಿಧರ ಕಾಲವಾಢ, ಪರಮೇಶ ಚಾಕರಿ,ಶಿವಸಂಗಪ್ಪ ಹುಚನೂರ,ಮುತ್ತಣ್ಣ ಮೇಟಿ, ಹನಮಂತಪ್ಪ ಕನಕಗಿರಿ,ಬಾಳಪ್ಪ ಬಂಡಾರಿ,ಮಲ್ಲಪ್ಪ ಹಾಲಳ್ಳಿ, ಮಲ್ಲನಗೌಡ ಪಾಟೀಲ್ ಶಿದ್ಲಿಂಗಪ್ಪ ತಳ್ಳಿಹಾಳ,ಕನಕರಾಯ ಮಾರನಾಳ ಯಮನೂರಪ್ಪ ಕಾಗಿ ಸೇರಿದಂತೆ ಮತ್ತಿತರರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿದರು,

Karnataka ಕರ್ನಾಟಕKoppal ಕೊಪ್ಪಳState ರಾಜ್ಯ Koppal ಕೊಪ್ಪಳYelburga ಯಲಬುರ್ಗಾ
Comments (0)
Add Comment