ಆಯುರ್ವೇದ ಔಷಧಿ ಪದ್ಧತಿಯಿಂದ ಸದೃಢ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.ಡಾ.ಟಿ,ನೇತ್ರಾ ಅಭಿಪ್ರಾಯ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್. ಯಲಬುರ್ಗಾ :

ಆಯುರ್ವೇದ ಔಷಧಿ ಪದ್ಧತಿ ಮೂಲಕ ಸದೃಢ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಪಂಚಕರ್ಮ ವಿಭಾಗದ ಡಾ,ಟಿ,ನೇತ್ರಾ ಹೇಳಿದರು.

ತಾಲೂಕಿನ ನರಸಾಪೂರ ಸಮುದಾಯ ಭವನದಲ್ಲಿ ಡಾ,ಎಲ್,ವಿ,ಜಿ,ನರಗುಂದಾ ಮೇಮೋರಿಯಲ್,ಆಯುರ್ವೇದಿಕ್ ವೈದ್ಯಕೀಯ ಆಸ್ಪಾತ್ರೆ ಮತ್ತು ನರಗುಂದ ಕಾಲೇಜ್ ಮತ್ತು ಆಯುರ್ವೇದಿಕ್ ವಿಜ್ಞಾನ ವಿಭಾಗ ಕೇಂದ್ರ ಮುರಡಿ
ಇವರುಗಳ ಸಂಯೋಗದಲ್ಲಿ ನುರಿತ ವೈದ್ಯರಿಂದ
ಸ್ತ್ರೀ ,ವಯಸ್ಕರು,ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷದ ವಿತರಣೆಯ ಸದುಪಯೋಗ ಪಡೆದುಕೊಳ್ಳಿರೆಂದು ಹೇಳಿದರು .

ಆಯುರ್ವೇದ ತಜ್ಞ ಡಾ,ನಗ್ಮಾ ಬಿಸರಳ್ಳಿ ಮಾತನಾಡಿ ಅತ್ಯುತ್ತಮ ಚಿಕಿತ್ಸಾ ವಿಧಾನಗಳಾದ ಮನೆ ಮದ್ದುಗಳು ಯಾವುದೇ ಅಡ್ಡ ಪರಿಣಾಮ ನೀಡದೆ ಆರೋಗ್ಯವನ್ನು ಹೆಚ್ಚಿಸುತ್ತಿದ್ದವು. ಆದರೆ ಇತ್ತೀಚಿನ ದಶಕಗಳಲ್ಲಿ ಗ್ರಾಮೀಣ ಭಾಗಗಳಲ್ಲೂ ಅಲೋಪತಿಕ್‌ ಔಷಧ ಪದ್ಧತಿಯತ್ತ ಜನ ಒಲವು ತೋರುತ್ತಿದ್ದಾರೆ ಎಂದರು. ಪಲ್ಲವಿ ತುಪ್ಪದ ಹವಳಮ್ಮ ಮುರಡಿ, ಶರಣಪ್ಪ ಗೌಡ ಮಾಲಿ ಪಾಟೀಲ್,ಭೀಮೇಶ,ವಿನಯ ಕುಮಾರ ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು,

Koppal ಕೊಪ್ಪಳState ರಾಜ್ಯ Koppal ಕೊಪ್ಪಳYelburga ಯಲಬುರ್ಗಾ
Comments (0)
Add Comment