ಲಘು ವಾಹನಾ ಚಾಲನ ತರಬೇತಿಗೆ ಅರ್ಜಿ ಆಹ್ವಾನ

ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ :
ಕೊಪ್ಪಳ ಜೂನ್ 28 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ದಾಂಡೇಲಿ ಹಾಗೂ ಟಾಟಾ ಮೋಟರ್ಸ್ ಧಾರವಾಡ ಇವರ ಜಂಟಿ ಸಹಯೋಗದಲ್ಲಿ ನಡೆಯುವ 30 ದಿನಗಳ ಲಘು ವಾಹನಾ ಚಾಲನ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಗಾಗಿ 20 ರಿಂದ 45 ವರ್ಷದೊಳಗಿನ ಯುವಕರು ತಮ್ಮ ಹೆಸರು, ಜನ್ಮ ದಿನಾಂಕ, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳೊಂದಿಗೆ ಅರ್ಜಿಯನ್ನು ಜುಲೈ 18ರೊಳಗಾಗಿ ತಲಪುವಂತೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ದಾಂಡೇಲಿ, ಈ ವಿಳಾಸಕ್ಕೆ ಅಥವಾ ವಾಟ್ಸಪ್ ಮೂಲಕ ಸಲ್ಲಿಸಬಹುದು.
ತರಬೇತಿ ಅವಧಿಯಲ್ಲಿ ಊಟೋಪಚಾರ ಹಾಗೂ ವಸತಿ ಸಂಪೂರ್ಣ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ವಿಸ್ತರಣಾ ಕೇಂದ್ರ, ಹಸನಮಾಳ, ದಾಂಡೇಲಿ-581325, ದೂ.ಸಂಖ್ಯೆ: 08284-298547, 9632149217, 9449782425 ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Karnataka ಕರ್ನಾಟಕKoppal ಕೊಪ್ಪಳState ರಾಜ್ಯ Koppal ಕೊಪ್ಪಳ
Comments (0)
Add Comment