ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷರು, ಸಲಹೆಗಾರರ ಪ್ರವಾಸ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್. ಕೊಪ್ಪಳ : ಕರ್ನಾಟಕ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷರಾದ ಟಿ.ಎಂ ವಿಜಯ್ ಭಾಸ್ಕರ್ ಭಾ.ಆ.ಸೆ (ನಿವೃತ್ತ) ಮತ್ತು ಕ.ಆ.ಸು.ಆ-2ರ ಸಲಹೆಗಾರರಾದ ಪ್ರಸನ್ನಕುಮಾರ್ ಭಾ.ಆ.ಸೆ (ನಿವೃತ್ತ) ಅವರು ಜೂನ್ 14, 15 ಮತ್ತು 16ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಕ.ಆ.ಸು.ಆ-2ರ ಅಧ್ಯಕ್ಷರು ಹಾಗೂ ಸಲಹೆಗಾರರು ಕೊಪ್ಪಳ ಜಿಲ್ಲೆಯ ಕಚೇರಿ, ಸಂಸ್ಥೆಗಳಿಗೆ ಭೇಟಿ ನೀಡಿ ಚರ್ಚಿಸಿ, ಆಡಳಿತ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಪಡೆಯಲು ಬರುತ್ತಿದ್ದಾರೆ. ಅದರಂತೆ ಗಣ್ಯರು, ಜೂನ್ 15ರಂದು ಬೆಳಿಗ್ಗೆ 10ಗಂಟೆಗೆ ಕುಷ್ಟಗಿ ವಲಯ ಅರಣ್ಯ, ಸಮಾಜಿಕ ಅರಣ್ಯ ಹಾಗೂ 11.30ಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ಕಚೇರಿಗೆ ಭೇಟಿ ನೀಡುವರು. ಮಧ್ಯಾಹ್ನ 12.30ಕ್ಕೆ ಕುಷ್ಟಗಿಯಿಂದ ನಿರ್ಗಮಿಸಿ, 1.30ಕ್ಕೆ ಕೊಪ್ಪಳದ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸುವರು. 2.30ಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ 4ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಕಚೇರಿಗೆ ಭೇಟಿ ನೀಡುವರು. ಬಳಿಕ ಕೊಪ್ಪಳ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಜೂನ್ 16ರಂದು ಬೆಳಿಗ್ಗೆ 9ಕ್ಕೆ ಕೊಪ್ಪಳದಿಂದ ನಿರ್ಗಮಿಸಿ, ಬೆಳಿಗ್ಗೆ 10ಗಂಟೆಗೆ ಗಂಗಾವತಿಗೆ ತೆರಳಿ ಎಲ್.ಜಿ.ಎಸ್.ಟಿ.ಓ (515) ಕಚೇರಿಗೆ ಹಾಗೂ 11ಕ್ಕೆ ಅಬಕಾರಿ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸುವರು. ಮಧ್ಯಹ್ನ 1 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ಬಳಿಕ ಮಧ್ಯಹ್ನ 2ಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಹಾಗೂ ಕೈಗಾರಿಕಾ ಉದ್ದಿಮೆದಾರರಿಂದ ಚರ್ಚಿಸುವರು. ಮಧ್ಯಹ್ನ 3ಕ್ಕೆ ಕರ್ನಾಟಕ ಗೃಹ ಮಂಡಳಿಯ ಪ್ರಾದೇಶಿಕ ಭೋಜನಾ ಕಚೇರಿಗೆ ಭೇಟಿ ನೀಡುವರು. 4ಗಂಟೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುವ ಕುರಿತು ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸಲಹೆಗಳನ್ನು ಪಡೆದುಕೊಳ್ಳುವರು. ಬಳಿಕ ಅಂದು ರಾತ್ರಿ 8.20ಗಂಟೆಗೆ ರೈಲು ಮಾರ್ಗವಾಗಿ ಬೆಂಗಳೂರು ಕಡೆಗೆ ಪ್ರಯಾಣ ಬೆಳಸುವರು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments (0)
Add Comment