ಕುಕನೂರು: ಜೂನ್ 16ರಂದು ಶಿಶುಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್.
ಕೊಪ್ಪಳ  (ಕರ್ನಾಟಕ ವಾರ್ತೆ): ಶಿಶುಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಜೂನ್ 16ರಂದು ಬೆಳಿಗ್ಗೆ 09.30ಕ್ಕೆ ಕುಕನೂರಿನ (ಗುದ್ನೆಪ್ಪನ ಮಠ) ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.

ಈ ಸಂದರ್ಶನದಲ್ಲಿ ಟೊಯೋಟಾಸ್ ಇಂಡಿಯನ್ ಪ್ರೈ.ಲಿ.ಬೆಂಗಳೂರು, ಶಿಂಡ್‌ಜಿನ್ ಇಂಡಿಯಾ ಪ್ರೈ.ಲಿ.ಬೆಂಗಳೂರ, ಅಟೋಲಿವ್ ಇಂಡಿಯನ್ ಪ್ರೈ.ಲಿ.ಬೆಂಗಳೂರು ಹಾಗೂ ಟೊಯೋಟಾ ಇಂಡಸ್ಟೀಸ್ ಇಂಜಿನ್ ಇಂಡಿಯಾ ಪ್ರೈ.ಲಿ ಇವರು ಭಾಗವಿಸಿ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳನ್ನು ಶಿಶುಕ್ಷು (ಅಪ್ರೆಂಟಿಶಿಫ್) ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ರೂ. 14,500 ರಿಂದ ರೂ. 16,500 ರವರಿಗೆ ಸ್ಟೈಪೆಂಡ್ ಇರುತ್ತದೆ.

ಕ್ಯಾಂಪಸ್ ಸಂದರ್ಶನದಲ್ಲಿ 18 ರಿಂದ 24 ವರ್ಷ ವಯೋಮಿತಿಯಲ್ಲಿರುವ ಐಟಿಐನ ಫಿಟ್ಟರ್, ಟರ್ನರ್, ವೆಲ್ಡರ್, ಇ.ಎಮ್., ಎಲೆಕ್ಟ್ರಿಷಿಯನ್, ಮಶಿನಿಸ್ಟ್, ಎಮ್.ಎಮ್.ವಿ., ಶೀಟ್‌ಮೇಟಲ್ ವರ್ಕರ್ ವೃತ್ತಿಯಲ್ಲಿ ಉತ್ತೀರ್ಣರಾದ ಅಥವಾ ಅಂತಿಮ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳ ಮೂಲ ದಾಖಲಾತಿ ಹಾಗೂ 1 ಸೆಟ್ಟ ಮಾರ್ಕ್ಸ್ ಝರಾಕ್ಸ್ ಪ್ರತಿಗಳು ಮತ್ತು 2 ಫೋಟೋ, ಬಯೋಡೆಟಾದೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಸಂ: 9164198246, 9964247098, 8618952961 ಮತ್ತು 9945789400 ಗೆ ಸಂಪರ್ಕಿಸಬಹುದಾಗಿದೆ ಎಂದು ಕುಕನೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments (0)
Add Comment