ಗೆದಗೇರಿ ತಾಂಡದಲ್ಲಿ ತಹಶೀಲ್ದಾರ ಬೇಟಿ ಕುಡಿಯುವ ನೀರಿನ ಪರಿಶೀಲನೆ ನಡೆಸಿದ ಅಧಿಕಾರಿಗಳು

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್. ಯಲಬುರ್ಗಾ :

ತಾಲೂಕಿನ ಗೆದಗೇರಿ ತಾಂಡದಲ್ಲಿ ಕಲುಷಿತ ನೀರು ಸೇವನೆಯಿಂದ ಜನರಿಗೆ ವಾಂತಿ ಬೇದಿ ಪ್ರಕರಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಗೆದಗೇರಿ ತಾಂಡಕ್ಕೆ ತಹಶಿಲ್ದಾರ ವಿಠಲ್ ಚೌಗಲಾ ಬುಧವಾರ ಭೇಟಿ ನೀಡಿ ಗ್ರಾಮದ ಕುಡಿಯುವ ನೀರು ಪರಿಶೀಲನೆ ಮಾಡಿದರು.

ತಾಲೂಕ ಪಂಚಾಯತ ಕಾರ್ಯನಿರ್ವಹಕಾಧಿಕಾರಿ ಸಂತೋಷ ಬಿರದಾರ ಪಾಟೀಲ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಂತ್ರಿಕ ಸಹಾಯಕ ಹುಸೇನ್ ಪಾಶಾ ಬೇಟಿ ನೀಡಿ ಜನರ ಸಮ್ಮಖದಲ್ಲಿಯೇ ನೀರು ಪರಿಕ್ಷೇ ಮಾಡಿದರು ನೀರು ಕುಡಿಯಲು ಯೋಗ್ಯವಿದೆ ಯಾವುದೆ ಅನುಮಾನ ಆತಂಕ ಪಡುವ ಅಗತ್ಯವೇ ಇಲ್ಲ.

ಗ್ರಾಮದಲ್ಲಿ ಎರಡು ಮೂರು ಮನೆಗಳಲ್ಲಿ ಮಾತ್ರ ವಾಂತಿ ಬೇದಿ ಕಾಣಿಸಿಕೊಂಡಿದ್ದು ಪ್ರಯೋಗಾಲಯದ ಸಿಬ್ಬಂದಿಗಳು ಅವರ ಮನೆಯ ನೀರು ಗ್ರಾಮಸ್ಥರ ಎದುರೆ ಪ್ರಯೋಗ ಮಾಡಲಾಯಿತು ಗ್ರಾಮದಲ್ಲಿ ನೈರ್ಮಲ್ಯತೆ ಅವ್ಯವಸ್ಥೆಯಲ್ಲಿದ್ದು ತಮ್ಮ ತಮ್ಮ ಮನೆಯ ಸುತ್ತ ಸುಚಿತ್ವತೆ ಕಾಪಾಡಿಕೊಳ್ಳಲು ಈ ಮೂಲಕ ತಿಳಿಸಲಾಯಿತು.

ನಂತರ ಗ್ರಾಮದಲ್ಲಿ ಪರೀಶಿಲಿಸ ಎಲ್ಲರು ತಮ್ಮ ತಮ್ಮ ಮನೆ ಮುಂದೆ ಸ್ವಚ್ಚತೆ ಆದ್ಯತೆ ನೀಡಬೇಕು ಶುದ್ದಿಕರಣದ ಘಟಕದ ನೀರು ಕುಡಿಯಲು ಮುಂದಾಗ ಬೇಕು ಎಂದು ತಹಶೀಲ್ದಾರ ವಿಠಲ್ ಚೌಗಲಾ ಸಲಹೆ ನೀಡಿದರು.

ಕುಡಿಯುವ ನೀರನ್ನ ಮತ್ತು ಬೋರವೆಲ್ ಸುತ್ತ ಮುತ್ತ ಸ್ವಚ್ಚತೆ ಗ್ರಾಮದ ಚರಂಡಿ ತಕ್ಷಣ ಸ್ವಚ್ಚತೆ ಮಾಡಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕ ಕಾರ್ಯನಿರ್ವಹಕಾಧಿಕಾರಿ ಸಂತೋಷ ಪಾಟೀಲ್ ಬೀರದಾರ ತಿಳಿಸಿದರು

ಗ್ರಾಮಪಂಚಾಯತ ಅಧಕ್ಷೆ ಶೇಖಮ್ಮ ರಾಠೋಡ,

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವರಾಜ ನಿಡಶೇಸಿ , ನೀರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಂತ್ರಿಕ ಸಹಾಯಕ ಹುಸೇನ್ ಭಾಷ ಪ್ರಯೋಗಾಲಯದ ಸಿಬ್ಬಂದಿಗಳಾದ ಆದಪ್ಪ, ಮಾಹಾಂತೆಶ, ಬಿ ಎನ್ ಹಳ್ಳಿ, ಬಸವರಾಜ ಹೂಗಾರ, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತ ಸದಸ್ಯರು ಗ್ರಾಮಸ್ಥರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Comments (0)
Add Comment