ಪರಿಸರವನ್ನು ಮಕ್ಕಳಂತೆ ಸಂರಕ್ಷಿಸಬೇಕು ಬಸವರಾಜ ಗುಬಾಚಿ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್.  ಯಲಬುರ್ಗಾ:

ಪ್ರತಿಯೊಬ್ಬರು ಪರಿಸರವನ್ನ ನಮ್ಮ ಮಕ್ಕಳಂತೆ ಸಂರಕ್ಷಣೆ ಮಾಡುವದರ ಜೊತೆಗೆ ಸ್ವಚ್ಛ ಪರಿಸರ ವನ್ನು ಕಾಪಾಡೋದು ಪ್ರತಿಯೊಬ್ಬರ ಕರ್ತವ್ಯ ಎಂದು ಐಸಿಐಸಿಐ ಫೌಂಡೇಶನ್ ಅಭಿವೃದ್ಧಿ ಅಧಿಕಾರಿ ಬಸವರಾಜ ಹೇಳಿದರು ಅವರು.

ತಾಲೂಕಿನ ಹಿರೇ ವಂಕಲಕುಂಟಾ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರಾಮ ಪಂಚಾಯತ ಐಸಿಐಸಿ ಫೌಂಡೇಶನ್ ಆರೋಗ್ಯ ಇಲಾಖೆ ಸಂಯೋಗದಲ್ಲಿ ನಡೆದ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಪಂಚದಲ್ಲಿ ಇರುವುದು ಒಂದೇ ಭೂಮಿ ಈ ಭೂಮಿ ಮೇಲೆ ಇರುವ ಪರಿಸರವನ್ನು ಕಾಪಾಡಿಕೊಳ್ಳುವಂತ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಮತ್ತು ಪ್ರತಿಯೊಂದು ವಿದ್ಯಾರ್ಥಿಯು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಸಿ ನೆಡುವದರ ಮೂಲಕ ಆ ಸಸಿಯು ಮರವಾಗಿ ಹೆಮ್ಮರವಾಗಿ ಬೆಳೆದಾಗ ಉತ್ತಮ ಪರಿಸರ ಮತ್ತು ಪ್ರಾಣಿ ಪಕ್ಷಿಗಳಿಗೆ ಮನುಷ್ಯರಿಗೆ ಆಸರೆಯಾಗಿ ನಮಗೆ ಒಳ್ಳೆಯ ಗಾಳಿ ನೀಡುತ್ತವೆ ಇಲ್ಲವೆಂದರೆ ಮುಂದೊಂದು ದಿವಸ ಶುದ್ಧವಾದ ಗಾಳಿಯನ್ನು ಕೂಡ ಹಣಕೊಟ್ಟು ಕೊಂಡುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ಐಸಿಐಸಿ ಫೌಂಡೇಶನ್ ವತಿಯಿಂದ ಸಸಿಗಳನ್ನು ಉಚಿತವಾಗಿ ನೀಡುವುದರ ಮೂಲಕ ಎಲ್ಲಾ ಶಾಲೆಗಳಿಗೆ ಮತ್ತು ರೈತರಿಗೆ ಚಲುಪಿಸಿ ಸುಂದರವಾದ ಪರಿಸರ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಸುಮಂತ ಜೈನ ಮಾತನಾಡಿ ಪರಿಸರ ಕಾಳಜಿ ಕೇವಲ ವರ್ಷದಲ್ಲಿ ಒಂದು ದಿನಕ್ಕೆ ಮಾತ್ರ ಸೀಮತವಾಗದೆ ಅದು ನಿತ್ಯದ ಕಾಯಕವಾಗಬೇಕು. ಪರಿಸರ ಸ್ವಚ್ಛತೆ ಮತ್ತು ಸಂರಕ್ಷ ಣೆ ನಮ್ಮ ಮನೆ ಮತ್ತು ಕಚೇರಿಯಿಂದಲೇ ಆರಂಭವಾಗಬೇಕು. ಪರಿಸರ ಶುಚಿತ್ವ ಮತ್ತು ಸಂರಕ್ಷ ಣೆ ನಿತ್ಯದ ಅರಿವು ಆಗಬೇಕು. ಕೇವಲ ಪರಿಸರ ದಿನಾಚರಣೆಯಂದು ಪರಿಸರ ಸಂರಕ್ಷ ಣೆ ಬಗ್ಗೆ ಎಚ್ಚೆತ್ತುಕೊಂಡರೆ ಸಾಲದು ಎಂದು ಸಲಹೆ ನೀಡಿದರು.

 

ಸಂಜೀವಿನಿ ಯೋಜನೆಯ ಗಿರಿಜಾ ಮಾತನಾಡಿ

ಸುಮಾರು 250 ಕ್ಕೂ ಹೆಚ್ಚು ಜನ ಸೇರಿದ್ದೀವಿ ಪ್ರತಿಯೊಬ್ಬರೂ ಸಸಿಗಳನ್ನ ನೆಡುವುದು ಅಷ್ಟೇ ಅಲ್ಲ ಅದು ಮರವಾಗಿ ಬೆಳೆಯಬೇಕು ಅಂದಾಗ ಈ ಪರಿಸರ ದಿನಾಚರಣೆ ಆಚರಣೆ ಮಾಡಿದರೆ ಸ್ವಾರ್ಥಕವಾಗುತ್ತದೆ ವರ್ಷಕ್ಕೊಮ್ಮೆ ಬರುವ ಒಂದು ಪರಿಸರ ದಿನಾಚರಣೆಯನ್ನ ಮಾಡಿದರೆ ಸಾಲದು ನಾವು ದಿನ ನಿತ್ಯ ಸಸಿಗಳ ಪೋಷಣಕಡೆ ಪ್ರತಿಯೋಬ್ಬರು ಜವಬ್ದಾರಿಯಾಗಿದೆ.

ಅಧ್ಯಕ್ಷತೆಯನ್ನ ಗ್ರಾಮ ಪಂಚಾಯತ ಅಧ್ಯಕ್ಷೆ ಹುಶೇನ್ ಬಿ ಅತ್ತಾರ ವಹಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿ ಹನುಮಂತಪ್ಪ ಮ್ಯಾಗೇರಿ ,ಜೆ,ಜೆ,ಎಂ,ಸಂಯೊಜಕ ಕನಕಪ್ಪ ಅಕ್ಕಿ,

ಗ್ರಾಮ ಆಡಳಿತಾಧಿಕಾರಿ ಅಂಜೂಮ್ ಐಸಿಐಸಿಐ ಫೌಂಡೇಶನ್ ಸಿಬ್ಬಂದಿಗಳಾದ ಶಂಭುಲಿಂಗ ಹಿರೇಮಠ ನಾಗರಾಜ್, ಬುಡೇಸಾಬ್, ಕಾಲೇಜ್ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments (0)
Add Comment