ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ತಾವರಗೇರಾ ಪಟ್ಟಣ ಪಂಚಾಯತಯಲ್ಲಿ ಎಸ್.ಬಿ.ಎಂ ಯೋಜನೆಯಡಿಯಲ್ಲಿ ನನ್ನ ಜೀವನ ನಮ್ಮ ಸ್ವಚ್ಛ ಸುಂದರ ನಗರ ಕಾರ್ಯಕ್ರಮದಡಿ ಆರ್ ಆರ್ ಆರ್ ಕೇಂದ್ರವನ್ನು ತೆರೆಯಲಾಗಿದೆ ಎಂದು ಉಪ ತಹಸೀಲ್ದಾರ ಶ್ರೀಶರಣಬಸವೇಶ ಕಳ್ಳಿಮಠ ಹೇಳಿದರು.

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್.  ಕುಷ್ಟಗಿ:

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತ ಬಲ ಭಾಗದ ಮಳಿಗೆಯಲ್ಲಿ ಆರ್ ಆರ್ ಆರ್ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಯಲಾಗಿದ್ದು, ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆರ್.ಆರ್.ಆರ್ ಕೇಂದ್ರಕ್ಕೆ ನೀಡಬೇಕು. ಸಾರ್ವಜನಿಕರು ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಅಂದರೆ ಆರ್.ಆರ್.ಆರ್ (ರೀಡಸ್ ರೀಯೂಸ್ ಮತ್ತು ರೀಸೈಕಲ್) ಆಗುವಂತ ವಸ್ತುಗಳಾದ ಬಳಕೆಯಾದ ಪ್ಲಾಸ್ಟಿಕ್, ಹಳೆಬುಕ್ಸ್, ಎಲೆಕ್ಟ್ರಿಕ್ ಸಾಮಾನುಗಳು, ಹಳೆಬಟ್ಟೆ, ಗೊಂಬೆಗಳು, ನ್ಯೂಸ್ ಪೇಪರ್ ಮತ್ತು ಉಪಯೋಗಕ್ಕೆ ಬಾರದ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ತಾವರಗೇರಾ ಪಟ್ಟಣದ ಪಟ್ಟಣ ಪಂಚಾಯತ ಬಲಭಾಗದ ಮಳಿಗೆಯಲ್ಲಿ ತೆರೆಯಲಾಗಿದೆ. ಎಲ್ಲಾ ಸಾರ್ವಜನಿಕರು ಮರುಬಳಕೆ ವಸ್ತುಗಳನ್ನು ಪಟ್ಟಣ ಪಂಚಾಯತ ಕಛೇರಿಯಲ್ಲಿನ ಆರ್.ಆರ್.ಆರ್ ಸಂಗ್ರಹಣ ಕೇಂದ್ರಕ್ಕೆ ತಂದು ಕೊಡಬೇಕು ಎಂದರು.

 

ತಾವರಗೇರಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನಬೀಸಾಬ ಖುದನವರ ಮಾತನಾಡಿದರು,
ಈ ಸಂದರ್ಭದಲ್ಲಿ ಮುಖಂಡರಾದ ವೀರುಪಣ್ಣ ನಾಲತವಾಡ, ಗ್ರಾಮಲೇಕ್ಕಿಗರಾದ ಸೂರ್ಯಕಾಂತ, ಸಂಗೀತಾ, ಪಪಂ ಸಿಬ್ಬಂದಿಗಳಾದ ಶ್ಯಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್, ರಾಘವೇಂದ್ರ ಮಸ್ಕಿ, ಅಬ್ದುಲ್ ಖಾದರ್, ಖಾಜಾ ಹುಸೇನ, ಹುಲ್ಲಪ್ಪ ಗಾಂಜಿ, ಸೇರಿದಂತೆ ಕಂದಾಯ ಹಾಗು ಪಪಂ ಸಿಬ್ಬಂದಿ ಹಾಗೂ ಗಣ್ಯರು ಇದ್ದರು.

 

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತ ಬಲಭಾಗದ ಮಳಿಗೆಯಲ್ಲಿ ಆರ್.ಆರ್.ಆರ್ (ರೀಡಸ್ ರೀಯೂಸ್ ಮತ್ತು ರೀಸೈಕಲ್) ಕೇಂದ್ರವನ್ನು ಉಪ ತಹಸೀಲ್ದಾರ ಶ್ರೀಶರಣಬಸವೇಶ ಕಳ್ಳಿಮಠ, ಪಪಂ ಮುಖ್ಯಾಧಿಕಾರಿ ನಭಿಸಾಬ ಖುದನವರ್ ಜಂಟಿಯಾಗಿ ಉದ್ಘಾಟಿಸಿದರು.

Kustagi
Comments (0)
Add Comment