ಮತಗಟ್ಟೆಯನ್ನು ವೀಕ್ಷಣೆ ಮಾಡಿದ ಮತದಾರರು

ಡಿ ಡಿ ನ್ಯೂಸ್. ಗದಗ

ಡಿ ಡಿ ನ್ಯೂಸ್. ಗದಗ

ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ವತಿಯಿಂದ ಚುನಾವಣೆ ಪೂರ್ವಭಾವಿ ಜಾಗೃತಿ ಕುರಿತು ಮತಗಟ್ಟೆಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಚುನಾವಣೆ ಆಯೋಗದ ಸೊಚನೆಯಂತೆ ಎಪ್ರಿಲ್ 29 ಹಾಗೂ 30 ಎರಡು ದಿನಗಳ ಕಾಲ ಮತಗಟ್ಟೆಗಳನ್ನು ತೆರೆದಿಡುವ ಮೂಲಕ ಮತಗಟ್ಟೆಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಡಿಓ ಶ್ರೀವಿದ್ಯಾ ಕೆ ಅವರು ಹೇಳಿದರು.


ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ನೂರಾರು ಕೂಲಿ ಕಾರ್ಮಿಕರು ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳನ್ನು ವೀಕ್ಷಣೆ ಮಾಡಿದರು ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆ ಇಲ್ಲಾ ಎಂದು ನೋಡಲು ವ್ಯವಸ್ಥೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕಡ್ಡಾಯ ಮತದಾನ ಮಾಡುವಂತೆ ಪ್ರತಿಜ್ಞಾನ ವಿಧಿಯನ್ನು ಬೋಧಿಸಲಾಯತ್ತು.
ಜೈ ಕಿಸಾನ್ ಕಲಾ ತಂಡಗಳಿಂದ ಮತದಾನ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಿ ಮತದಾರರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಜಗದೀಶ ಸತ್ಯಪ್ಪನವರ, ಹನುಮಂತ ಅಳವಂಡಿ, ಮಾರುತಿ ಹಚ್ಚಪ್ಪನವರ, ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಂಜುನಾಥ ಬಸರಿಕಟ್ಟಿ, ಮುಸ್ಕಿನಭಾವಿ, ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಬಿಎಲ್ಓ, ನರೇಗಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Gadag
Comments (0)
Add Comment