ಡಿ ಡಿ ನ್ಯೂಸ್. ಶ್ರೀನಿವಾಸಪುರ
ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭವಾಗುತ್ತಿವೆ. ಆದರೆ ಇಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಅಧಿಕಾರಿಗಳು ಬೀದಿ ಪಾಲು ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಶಾಲಾ ಕೊಠಡಿಗಳಿಲ್ಲದೆ ಒಂದು ವರ್ಷದಿಂದ ದೇವಾಲಯದಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ
ಮೊಗಲಹಳ್ಳಿ ಸರ್ಕಾರಿ ಶಾಲೆಯ ಅವ್ಯವಸ್ಥೆ ಇದಾಗಿದೆ. ಶಾಲಾ ಕೊಠಡಿ ಬಿದ್ದು ಒಂದು ವರ್ಷ ಕಳೆದರೂ ಸಹ ಕಟ್ಟಡ ನಿರ್ಮಾಣ ಮಾಡುವುದರಲ್ಲಿ ಅಧಿಕಾರಗಳು ವಿಫಲವಾಗಿದ್ದು ಮಕ್ಕಳ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು, ಪೋಷಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಮಕ್ಕಳೆಂದರೆ ಅಧಿಕಾರಿಗಳಿಗೆ ನಿರ್ಲಕ್ಷವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಸರ್ಕಾರಿ ಮಕ್ಕಳ ಪರಿಸ್ಥಿತಿ ಕೇಳುವವರೇ ಇಲ್ಲವೇ….? ಎಂಬಂತೆ ಆಗಿದೆ.
ಸರ್ಕಾರದಿಂದ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾಗಿದ್ದ 30ಲಕ್ಷ ಅನುದಾನ ಬಿಡುಗಡೆ ಆಗಿದೆ. ಅನುದಾನ ಬಿಡುಗಡೆಯಾದರೂ ಕಟ್ಟಡ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಮೀನಮೇಷ ಯಾಕೆ, ಶಾಸಕರೇ ಒಮ್ಮೆ ಈ ಕಡೆ ಗಮನಹರಿಸಿ ಶೀಘ್ರವೇ ಶಾಲಾ ಕಟ್ಟಡ ನಿರ್ಮಿಸಲು ಸಹಕರಿಸಿ, ಈ ಕೂಡಲೇ ಶಾಲೆಯ ಕಟ್ಟಡವನ್ನು ನಿರ್ಮಿಸಬೇಕೆಂದು ಅಧಿಕಾರಿಗಳ ಹತ್ತಿರ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.