ಸರ್ವಾಂಗಿಣ ಅಭಿವ್ರದ್ದಿಯಾಗಿ ರಾಜ್ಯದಲ್ಲಿ ಮಾದರಿ ಮತಕ್ಷೇತ್ರ ಯಾವುದಾದರು ಇದ್ದರೆ ಅದು ಇಂಡಿ ಮತಕ್ಷೇತ್ರ.ಯಶವಂತರಾಯಗೌಡ ಪಾಟೀಲ.
ಡಿ ಡಿ ನ್ಯೂಸ್. ಇoಡಿ
ಡಿ ಡಿ ನ್ಯೂಸ್. ಇಂಡಿ
ಇಂಡಿಯಲ್ಲಿ ಅನೇಕ ದಶಗಳಿಂದ ಅಭೀವೃದ್ದಿ ವಂಚಿತವಾಗಿದ್ದು ಕಳೇದ ೧೦ ವರ್ಷಗಳಲ್ಲಿ ಏನ್ನೆಲ್ಲ ಅಭಿವೃದ್ದಿ ಕಂಡಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದ ವಿಷಯ. ಈ ಭಾಗ ಎಲ್ಲ ವಿಧದಲ್ಲು ಸರ್ವಾಂಗಿಣ ಅಭೀವೃದ್ದಿಯಾಗಿ ರಾಜ್ಯದಲ್ಲಿ ಮಾದರಿ ಮತಕ್ಷೇತ್ರ ಯಾವುದಾದರು ಇದ್ದರೆ ಅದು ಇಂಡಿ ಎಂದು ರಾಜ್ಯದ ಜನ ಬೆರಳು ಮಾಡಿ ತೊರಿಸಬೇಕು ಇದುವೇ ನನ್ನ ಗುರಿ ಎಂದು ಇಂಡಿ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ತಡವಲಗಾ ಗ್ರಾಮದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಈ ಭಾಗದ ರೈತರ ಜೀವನಾಡಿಯಾಗಿದ್ದ ಲಿಂಬೆ ಬೆಳೆಯನ್ನು ಉಳಿಸಲು ಟ್ಯಾಂಕರ್ ಮೂಲಕ ನೀರು ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದನ್ನು ನೊಡಿದ್ದೆನೆ. ಅಂತಹ ಕಷ್ಟ ಅನುಭವಿಸಿದ ನಾವು ಈ ಭಾಗದಲ್ಲಿ ಕೆರೆ ತುಂಬಿಸುವ ಮೂಲಕ ಸ್ವಲ್ಪ ಸಮಾದಾನ ತರುವಂತೆ ಮಾಡಿದ್ದೆನೆ. ಉಳಿದ ನೀರಾವರಿ ಯೋಜನೆಗಳನ್ನು ಯಥಾವತ್ತಾಗಿ ಜಾರಿಗೆ ತಂದು ಈ ಭಾಗ ಸಂಪೂರ್ಣ ನೀರಾವರಿಯಾಗುವವರೆಗೆ ವಿಶ್ರಮಿಸುವುದಿಲ್ಲ. ಅದಕ್ಕಾಗಿ ಇದೊಂದು ಬಾರಿ ಭಾರಿ ಅಂತರದ ಗೆಲುವು ತಂದುಕೊಟ್ಟಲ್ಲಿ ಮತಕ್ಷೇತ್ರದ ಚಿತ್ರಣವೆ ಹೊಸ ಸ್ವರೂಪದಲ್ಲಿ ಬದಲಾವಣೆ ಕಾಣಲಿದೆ ಎಂದರು.
ಇಂಡಿ ರೈಲು ನಿಲ್ದಾಣ ಪಕ್ಕದ ಬೂದಿಹಾಳ ಗ್ರಾಮದಲ್ಲಿ ಈಗಾಲೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಭುಮಿಯನ್ನು ಗುರ್ತಿಸುವ ಕಾರ್ಯ ಮಾಡಿದ್ದೆನೆ. ಮುಂಬರು ದಿನಗಳಲ್ಲಿ ಕೈಗಾರಿಕೆ ಕ್ರಾಂತಿಯಾಗುವ ಮೂಲಕ ಯುವಕರಿಗೆ ಉದ್ಯೊಗ ಸೃಷ್ಟಿಯಾಗುವಂತೆ ಮಾಡಿದ್ದೆನೆ. ಆದ್ದರಿಂದ ಈ ಎಲ್ಲ ಕಾರ್ಯಾಗಳು ಸಾಕಾರಗೊಳ್ಳಬೇಕಾದರೆ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ಭಾರಿ ಅಂತರದ ಗೆಲುವು ತಂದು ಕೊಡಬೇಕು. ಇದು ನಿಮ್ಮ ಕೈಯಲ್ಲಿದ್ದು ಬರುವ ಮೇ.೧೦ ರಂದು ಹಸ್ತದ ಗುರ್ತಿಗೆ ಮತ ನೀಡಿ ನನಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಬಾಬುಸಾವುಕಾರ ಮೇತ್ರಿ, ಚಂದ್ರಶೇಖರ ರೂಗಿ, ಬಿ.ಎಸ್.ಇಂಡಿ, ತಮ್ಮಣ್ಣಾ ಪೂಜಾರಿ, ಆನಂದ ಹುಣಸಗಿ, ಸೋಮಶೇಖರ ಬ್ಯಾಳಿ, ಉಸ್ಮಾಣಗಣಿ ಕಸಬ, ರವಿ ಹೊಸಮನಿ, ಮಾಪಾ ತಾಂಬೊಳಿ, ಶೇಖರ ಕಳಾವಂತ, ಕಲ್ಯಾಣಿ ಗಣವಲಗಾ, ಮಲ್ಲು ಇಂಡಿ, ರಾಮಗೊಂಡ ಚವ್ಹಾಣ, ಸದಾಶಿವ ಪ್ಯಾಟಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಅಶೋಕ ಮಿರ್ಜಿ.ಧರೇಪ್ಪ ಮೇತ್ರಿ, ಕಿರಣ ಪೂಜಾರಿ, ಸಲೀಂ ಬಾಗವಾನ, ಅನೀಲ ಗೊಬ್ಬುರ,ಕಲ್ಮೇಶ ಹೊಸಮನಿ, ಅಪ್ಪಾಸಾಹೇಬ ನೀಂಬಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.