ಡಿ ಡಿ ನ್ಯೂಸ್.ಯಲಬುರ್ಗಾ
ಪ್ರತಿವರ್ಷದಂತೆ ಈ ವರ್ಷವು ಕೂಡ ಪಟ್ಟಣದ ಶ್ರೀ ಮೊಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ಬೆಳಿಗ್ಗೆ ಧ್ವಜಾರೋಹಣ ನಂತರ ಕರ್ತ್ಯು ಮೂರ್ತಿಗೆ ರುದ್ರಾಭಿಷೇಕ ಹಾಗೂ ಸಾಮೂಹಿಕ ವಿವಾಹ ಹಾಗೂ ಅನ್ನಪ್ರಸಾದ ನೇರವೇರಿತು, ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ನೇರವೇರಿತು. ಪಟ್ಟಣದ ಜನತೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಮೊಗ್ಗಿ ಬಸವೇಶ್ವರ ಕೃಪೆಗೆ ಪಾತ್ರರಾದರು.
ಪೋಟೋ: ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ರಥೋತ್ಸವ ಜರುಗಿತು.