ಡಿಡಿ ನ್ಯೂಸ್, ಕೊಪ್ಪಳ: ಭಾರತ
ಚುನಾವಣಾ ಆಯೋಗದ ನಿರ್ದೇಶನದಂತೆ
ಏಪ್ರೀಲ್ ೧೩ರಂದು ಚುನಾವಣಾ ಅಧಿಸೂಚನೆ
ಹೊರಡಿಸಲು ಮತ್ತು ನಾಮಪತ್ರಗಳನ್ನು ಸ್ವೀಕರಿಸಲು
ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ
ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ
ಚುನಾವಣಾಧಿಕಾರಿಗಳಾದ ಎಂ.ಸುAದರೇಶಬಾಬು
ಅವರು ಕೊಪ್ಪಳ, ಯಲಬುರ್ಗಾ, ಕುಷ್ಟಗಿ,
ಗಂಗಾವತಿ, ಕನಕಗಿರಿ ವಿಧಾನಸಭಾ ಕ್ಷೇತ್ರಗಳ
ಚುನಾವಣಾಧಿಕಾರಿಳಿಗೆ ಸೂಚಿಸಿದರು.
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ
ಚುನಾವಣೆ-೨೦೨೩ ಹಿನ್ನೆಲೆಯಲ್ಲಿ ಏಪ್ರೀಲ್
೧೧ರಂದು ಎಲ್ಲಾ ಚುನಾವಣಾಧಿಕಾರಿಗಳು
ಹಾಗೂ ತಹಸೀಲ್ದಾರರೊಂದಿಗೆ ಜಿಲ್ಲಾಡಳಿತ
ಭವನದಲ್ಲಿನ ಕೇಸ್ವಾನ್ ಹಾಲ್‌ನಲ್ಲಿ ಸಭೆ ನಡೆಸಿ
ಅವರು ಮಾತನಾಡಿದರು. ಭಾರತ ಚುನಾವಣಾ
ಆಯೋಗದ ನಿರ್ದೇಶನಗಳನ್ವಯ ಮತದಾರರ
ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಅರ್ಜಿಗಳನ್ನು
ಸಲ್ಲಿಸಲು ಕೊನೆಯ ದಿನಾಂಕವಾದ ಏಪ್ರೀಲ್
೧೧ರವರೆಗೆ ಸ್ವೀಕೃತವಾದ ಅರ್ಜಿಗಳನ್ನು
ನಿಗದಿತ ಅವಧಿಯೊಳಗಡೆ ನಿಯಮಾನುಸಾರ
ಪರಿಶೀಲಿಸಿ ವಿಲೇವಾರಿ ಮಾಡಲು ಎಲ್ಲಾ
ಚುನಾವಣಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ
ಸೂಚಿಸಿದರು. ಚುನಾವಣಾ ಪ್ರಚಾರ ಕಾರ್ಯಗಳಿಗೆ
ಅನುಮತಿ ಕೋರಿ ಸ್ವೀಕೃತವಾಗುವ ಅರ್ಜಿಗಳಿಗೆ
ಸಂಬAಧಿಸಿದAತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ
ಚುನಾವಣಾಧಿಕಾರಿಗಳು ಅನುಮತಿ ನೀಡಲು ಮತ್ತು
ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳ
ಕಚೇರಿಯಿಂದ ಅನುಮತಿ ನೀಡಲಾಗುವುದು ಎಂದು
ಚುನಾವಣಾಧಿಕಾರಿಗಳಿಗೆ ತಿಳಿಸಿದರು.
ಭಾರತ ಚುನಾವಣಾ ಆಯೋಗದ
ನಿರ್ದೇಶನಗಳನ್ವಯ ಈ ಚುನಾವಣೆಯಲ್ಲಿ
ವಿಕಲಚೇತನರಿಗೆ, ೮೦ಕ್ಕಿಂತ ಹೆಚ್ಚಿನ ವಯೋಮಾನದ
ಮತದಾರರಿಗೆ, ಕೋವಿಡ್-೧೯ ಸೋಂಕಿತರಿಗೆ
ಮತು ್ತಅಗತ್ಯ ಸೇವೆಗಳಾದ ವಿದ್ಯುತ್ ಸರಬರಾಜು
ಇಲಾಖೆ, ಬಿಸ್ಸೆನ್ನೆಲ್, ರೈಲ್ವೆ ಇಲಾಖೆ, ದೂರದರ್ಶನ,
ಆಲ್ ಇಂಡಿಯಾ ರೇಡಿಯೋ, ಆರೋಗ್ಯ ಇಲಾಖೆ,
ವಿಮಾನಯಾನ ಇಲಾಖೆ, ಬಸ್ ಸೇವೆ, ಅಗ್ನಿಶಾಮಕ
ಇಲಾಖೆ, ಭಾರತ ಚುನಾವಣಾ ಆಯೋಗದಿಂದ
ಅಧಿಕೃತಗೊಳಿಸಲಾದ