deshadoothanews

ಸಸಿಗಳನ್ನು ನೆಡುವದು ದೇಶದಲ್ಲಿ ಉತ್ತಮವಾದ ಕೆಲಸ-ಕಾಶಿಮಸಾಬ್ ತಳಕಲ್

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕುಕನೂರು,

. ಪಟ್ಟಣದಲ್ಲಿ ಕಿದ್ಮೇಮತಿ ಕಮಿಟಿವತಿಯಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಸಿಗಳನ್ನು ಹಚ್ಚುವದರಿಂದ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ ಅಂತ ಕಾರ್ಯಕ್ರಮಗಳಿಗೆ ಯುವಕರು ಪುಷ್ಟಿ ನೀಡಿ ಇದರಲ್ಲಿ ತಾವೆಲ್ಲರೂ ಭಾಗಿಯಾಗಬೇಕು ಪರಿಸರ ಬೆಳಸಲು ಮುಂದಾಗಬೇಕು ಮತ್ತು ಸಸಿಗಳುನ್ನು ನೆಡುವ ಕಾರ್ಯಕ್ರಮವನ್ನು ನಾವು ಮಾಡಿದ್ದೇವೆ ಅದರ ಪಾಲನೆ ಪೋಷಣೆಗೆ ನೀವು ಮುಂದಾಗಬೇಕು ಎಂದು ಹೇಳಿದರು.

ನಂತರ ನಿವೃತ್ತ ಉಪನ್ಯಾಸ ಆರ್ ಪಿ ರಾಜೂರು ಮಾತನಾಡಿ ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಇದು ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಹಾಗೆ ೧೯೭೨ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನರ‍್ಧರಿಸಲಾಗಿ, ೧೯೭೩ರಿಂದ ಪರಿಸರ ದಿನದ ಆಚರಣೆ ಪ್ರಾರಂಭವಾಯಿತು. ಅಂತೆಯೇ ಜೂ ೫ ವಿಶ್ವ ಪರಿಸರ ದಿನಾಚರಣೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ರ‍್ಷ ನರ‍್ದಿಷ್ಟ ವಸ್ತು ವಿಷಯವನ್ನಾಧರಿಸಿ ಪ್ರತಿ ರ‍್ಷ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ‘ಪರಿಸರ, ಪಕೃತಿ ನಮಗೆ ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಅಗತ್ಯ, ಅನಿವರ‍್ಯ. ಆದರೆ ನಾವಿಂದು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ, ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ಮಾನವನು ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಪರಿಸರ ದಿನಾಚರಣೆಯಂದು ಸಸಿ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ ನೇಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗದೇ ಪರಿಸರ ಕಾಳಜಿ ನಿರಂತರವಾಗಿರಬೇಕು’ ಎಂದರು.

ಈ ಸಂದರ್ಭದಲ್ಲಿ , ತೋಟಗಾರಿಕೆ ಇಲಾಖೆಯ ಸಹಾಯ ನಿರ್ದೇಶಕರು ನಿಂಗನಗೌಡ್ರ ಲಿಂಗಣ್ಣವರು,ಅರಣ್ಯ ಇಲಾಖೆ ಅಧಿಕಾರಿ ಅಂದಪ್ಪ ಕುರಿ,ರಹೇಮನ ಮಕ್ಕಪ್ಪನವರು, ಸಿರಾಜ ಕರಾಮುದಿ, ಹಾಗೂ ಇತರರು ಇದ್ದರು.

Leave A Reply

Your email address will not be published.