ಡಿ ಡಿ ನ್ಯೂಸ್. ಕುಕನೂರು
ಪಟ್ಟಣದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪಟ್ಟಣದ ಗವಶ್ರೀನಗರದ ಸರಕಾರಿ ನೌಕರ ಮನೆಯ ಪಕ್ಕದ ಗಿಡದ ಕೆಳೆಗೆ ಬಿಟ್ಟಿದ್ದ ಬೈಕ್ನ ಪೆಟ್ರೋಲ್ನ್ನು ಮಧ್ಯರಾತ್ರಿ ೧.೩೦ರ ಸುಮಾರ ಕಳ್ಳತನ ಮಾಡಿದ್ದು ಮನೆಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೇರೆಯಾಗಿದೆ.
ಮನೆಯ ಮುಂದೆ ನೂರಾರು ಬೈಕ್ಗಳನ್ನು ಜನರು ಬಿಟ್ಟಿರುತ್ತಾರೆ ಕೆಲವೊಂದು ವಾರ್ಡ್ಗಳಲ್ಲಿ ಪೆಟ್ರೋಲ್ ಕಳ್ಳತನ ಕ್ರಮೇಣ ನಡೆಸಿದೆ ಆದರೆ ಅವರಿಗೆ ಗೊತ್ತಾದರು ಸುಮ್ಮನಾಗಿದ್ದಾರೆ. ಈಗ ಸಿಸಿಟಿವಿಯಲ್ಲಿ ಸೇರೆಯಾದ ಪೆಟ್ರೋಲ್ ಕಳ್ಳತನದ ದೃಶ್ಯ ಬೈಕ್ ಸವಾರರಿಗೆ ನಿದ್ದೆಗೆಡಿಸಿದೆ. ಕಳ್ಳರಿಗೆ ಪೆಟ್ರೋಲ್, ಡಿಸೇಲ್, ಮನೆಯ ಮುಂದಿನ ಬೆಲೆಬಾಳುವಂತಹ ವಸ್ತುಗಳು ಏನೇ ಸಿಕ್ಕರು ಕಣ್ಣು ಮಿಟುಕುವಷ್ಟರಲ್ಲಿ ಮಾಯಾವಾಗುತ್ತಿವೆ.
ಪೋಲಿಸ್ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಆದಷ್ಟು ಬೇಗ ಮಟ್ಟಹಾಕಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾರು ಇಲ್ಲದ ಮನೆಗೆ ಇಂತಹ ಕಳ್ಳರು ನುಗ್ಗುವದು ತುಂಬದಿನ ಹಿಡಿಯುವದಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತೀದ್ದಾರೆ.
ಕುಕನೂರು ಪಟ್ಟಣದ ಗವಿಶ್ರೀನಗರ ಮನೆಯೊಂದರಲ್ಲಿ ಮಧ್ಯರಾತ್ರಿ ೧.೩೦ ರ ಸಮಾರಿಗೆ ಬೈಕ್ನಪೆಟ್ರೋಲ್ ಕದ್ದು ಒಯುತ್ತೀರುವ ಕಳ್ಳ.