ಡಿ ಡಿ ನ್ಯೂಸ್. ಕೊಪ್ಪಳ :
ಗುವಿಸಕಂನಿ ಕೊಪ್ಪಳ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಜೂನ್ 17ರಂದು ಬೆಳಿಗ್ಗೆ 11ಗಂಟೆಗೆ ಕಾರ್ಯ ಮತ್ತು ಪಾಲನೆ ಉಪ-ವಿಭಾಗ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ವಿದ್ಯುತ್ ಸಂಪರ್ಕ ಹಾಗೂ ಬಿಲ್ಲುಗಳ ಬಗ್ಗೆ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಪ್ರತಿ 03ನೇ ಶನಿವಾರ ಕಂಪನಿಯ ಸುತ್ತೋಲೆಗಳಾನುಸಾರ ಹಾಗೂ ಮೇಲಾಧಿಕಾರಿಗಳ ಸೂಕ್ತ ನಿರ್ದೇಶನಗಳಂತೆ ವಿದ್ಯುತ್ ಗ್ರಾಹಕರ ಸಂವಾದ ಸಭೆ ನಡೆಸಬೇಕಾಗಿದ್ದು, ಕೊಪ್ಪಳ ಉಪ-ವಿಭಾಗದ ವ್ಯಾಪ್ತಿಗೆ ಒಳಪಡುವ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ಚರ್ಚಿಸಿ, ಪರಿಹರಿಸಲಾಗುವುದೆಂದು ಗು.ವಿ.ಸ.ಕಂ.ನಿಯಮಿತ ಕೊಪ್ಪಳ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.