deshadoothanews

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತ್ ಬಂಡಿ ಇವರ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ

ಸಹಯೋಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಬಂಡಿ ಶಾಲಾ ಆವರಣದಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರತ್ನಮ್ಮ ವಣಗೇರಿ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನೋಡಲ್ ಅಧಿಕಾರಿ ಶ್ರೀ ಎಫ್ ಎಂ ಕಳ್ಳಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯಲಬುರ್ಗಾ ಇವರು ಮಾತನಾಡಿ ಕೇವಲ ಸಸಿ ನೆಟ್ಟರೆ ಮಾತ್ರ ವಿಶ್ವ ಪರಿಸರ ದಿನಾಚರಣೆ ಸಾರ್ಥಕವಾಗುವದಿಲ್ಲ. ಅದರೊಂದಿಗೆ ಸಸಿಗಳ ಸಂರಕ್ಷಣೆ ಮಾಡಬೇಕು. ಇದರ ಜೊತೆಗೆ ಸ್ವಚ್ಛತೆಗೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಅನುಸರಿಸಿ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಪ್ರತಿ ಗ್ರಾಮದಲ್ಲಿ ಎಲ್ಲಾ ಕುಟುಂಬಗಳಿಗೆ ಕಸ ಸಂಗ್ರಹಣೆ ಮಾಡುವದಕ್ಕೆ ಕಸದ ಬುಟ್ಟಿ ವಿತರಣೆ ಮಾಡಲಾಗಿದೆ. ಎಲ್ಲರೂ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹ ಮಾಡಬೇಕು. ಸ್ವಚ್ಛವಾಹಿನಿ ಬಂದಾಗ ಸಂಗ್ರಹ ಮಾಡಿದ ಕಸವನ್ನು ನೀಡುವ ಮೂಲಕ ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ, ಸದಸ್ಯರಾದ ಶ್ರೀ ಕಳಕಪ್ಪ ದುಗಲದ, ಕಾಮಪ್ಪ ಹೊರಪೇಟಿ, ಶರಣಪ್ಪ ಅಂಗಡಿ, ಯಮನೂರಪ್ಪ ಭಜಂತ್ರಿ, ಕಳಕವ್ವ ಅಡಗುಡದ, ಬಸಪ್ಪ ತೊಂಡಿಹಾಳ, ಬಸವರಾಜ ರೊಟ್ಟಿ, ಮಂಜುನಾಥ ನಿಡಶೇಸಿ , ಪ್ರಾಚಾರ್ಯ ಶರಣಯ್ಯ ಹಾಳಕೇರಿ, ಮುಖ್ಯೋಪಾಧ್ಯಾಯರಾದ ಶಿವಯೋಗಪ್ಪ, ಶರಣಪ್ಪ ಬಿಲ್ಲಾರ, ಸುಮಂಗಲಾ ತೊಂಡಿಹಾಳ ಮತ್ತು ಎಲ್ಲಾ ಶಿಕ್ಷಕರು ಹಾಜರಿದ್ದರು..

Leave A Reply

Your email address will not be published.