deshadoothanews

ಬೆಳೆವಿಮೆ ಪರಿಹಾರದ ಮಾಹಿತಿಗೆ ಪ್ರತಿನಿಧಿಗಳನ್ನು ಸಂಪರ್ಕಿಸಿ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

ಜಿಲ್ಲೆಯ ರೈತ ಬಾಂಧವರು, 2020-21ನೇ ಸಾಲಿನಿಂದ 2022-23ನೇ ಸಾಲ್ಲಿನವರೆಗೆ ಬೆಳೆವಿಮೆ ಯೋಜನೆಯಡಿ ಬೆಳೆವಿಮೆ ಪರಿಹಾರಕ್ಕೆ ಸಂಬAಧಿಸಿದAತೆ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಪ್ಯೂಚರ್ ಜನರಲಿ ಇನ್ಸೂರೇನ್ಸ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಅವರು ತಿಳಿಸಿದ್ದಾರೆ.

ಪ್ಯೂಚರ್ ಜನರಲಿ ಇನ್ಸೂರೇನ್ಸ ಕಂಪನಿಯ ಪ್ರತಿನಿಧಿಗಳು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯ ಇದ್ದು, ರೈತರಿಗೆ ಬೆಳೆವಿಮೆ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಆದ ಕಾರಣ ರೈತರು ತಮ್ಮ ತಾಲೂಕುವಾರು ಇನ್ಸೂರೇನ್ಸ ಕಂಪನಿಯ ಪ್ರತಿನಿಧಿಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.


ಇನ್ಸೂರೇನ್ಸ ಕಂಪನಿಯ ಪ್ರತಿನಿಧಿಗಳ ತಾಲೂಕುವಾರು ವಿವರ: ಕೊಪ್ಪಳ ರಾಘವೇಂದ್ರ ಬಂಟ್ ಮೊ.ಸಂ: 9148442314, ಕುಷ್ಟಗಿ ಸುನೀಲ್ ಇಟಿನಿ ಮೊ.ಸಂ: 7996453241, ಯಲಬುರ್ಗಾ ಸಂಗಪ್ಪ ಬೆಣ್ಣಿ ಮೊ.ಸಂ: 9964397577, ಗಂಗಾವತಿ ಸತೀಶ ಸುರೊಜಿ ಮೊ.ಸಂ: 8861468340, ಕಾರಟಗಿ ಮಹೇಂದ್ರ ಎಸ್ ಮೊ.ಸಂ: 9590642324, ಕನಕಗಿರಿ ವಿಶಾಲ್ ಹೆಚ್ ಮೊ.ಸಂ: 9008078851, ಕುಕನೂರು ಕಳಕಪ್ಪ ಕಮತಗಿ ಮೊ.ಸಂ: 8497074017, ಇವರು ಪ್ಯೂಚರ್ ಜನರಲಿ ಇನ್ಸೂರೇನ್ಸ ಕಂಪನಿಯ ಪ್ರತಿನಿಧಿಗಳಾಗಿದ್ದಾರೆ.

ಪ್ಯೂಚರ್ ಜನರಲಿ ಇನ್ಸೂರೇನ್ಸ ಕಂಪನಿಯ ಕೊಪ್ಪಳ ಜಿಲ್ಲೆಯ ಪ್ರಧಾನ ಕಛೇರಿಯು ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿ, ನಾಸವಾಲೆ ಬಿಲ್ಡಿಂಗ್, 1ನೇ ಮಹಡಿ, ಕೊಪ್ಪಳದಲ್ಲಿ ಇದ್ದು, ರೈತ ಬಾಂಧವರು ನೇರವಾಗಿ ಸಹಿತ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

*ಆಕರ್ಷಣಿಯ ಕೇಂದ್ರಗಳಾದ ಮಹಿಳೆಯರ ಪಿಂಕ್ ಮತಗಟ್ಟೆಗಳು
*ಯಲಬುರ್ಗಾ ಪಟ್ಟಣದ ವಿಶಿಷ್ಟಚೇತನರ ವಿಶೇಷ ಮತಗಟ್ಟೆ
ಮತದಾರರ ಗಮನ ಸೆಳೆಯುತ್ತಿವೆ ಮಾದರಿ ಮತಗಟ್ಟೆಯ ವರ್ಲಿ ಚಿತ್ರಗಳು

2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 63-ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮತದಾರರ ಮತದಾನ ಹೆಚ್ಚಿಸುವ ಮತ್ತು ಗಮನಸೆಳೆಯುವಂತ ನಾಲ್ಕು ಪಿಂಕ್, ಒಂದು ವಿಶಿಷ್ಟಚೇತನ ಹಾಗೂ ಐದು ಮಾದರಿ ಮತಗಟ್ಟೆಗಳನ್ನು ನಿರ್ಮಿಸಿದ್ದು, ಈ ಕೇಂದ್ರಗಳು ಮತದಾರರ ಗಮನ ಸೆಳೆಯುವಂತಿವೆ.

ಯಲಬುರ್ಗಾ ತಾಲೂಕಿನ ಬೇವೂರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಾದರಿ ಹಾಗೂ ಪಿಂಕ್ ಮತಗಟ್ಟೆ ವರ್ಲಿ ಚಿತ್ರಗಳು ಮತದಾರರ ಗಮನ ಸೆಳೆಯುತ್ತಿದ್ದರೆ ಮಹಿಳೆಯರಿಗಾಗಿಯೇ ವಿಶೇಷವಾಗಿ ನಿರ್ಮಿಸಿರುವ ಪಿಂಕ್ ಮತಗಟ್ಟೆ ಬಣ್ಣ ಬಣ್ಣದಿಂದ ಕೂಡಿದ್ದು ಮಹಿಳೆಯ ಆಕರ್ಷಣಿಯ ಕೇಂದ್ರವಾಗಲಿದೆ.

ಯಲಬುರ್ಗಾ ಪಟ್ಟಣದ ಪಟ್ಟಣ ಪಂಚಾಯತಿ ಹಾಗೂ ಸರ್ಕಾರಿ ಮಾದರಿ ಶಾಲೆಯಲ್ಲಿ ಪಿಂಕ್ ಮತಗಟ್ಟೆಯಾಗಿ ನಿರ್ಮಾಣ ಮಾಡಲಾಗಿದ್ದು, ಈಗ ಬಣ್ಣದಿಂದ ಕಂಗೊಳಿಸುತ್ತಿದೆ. ಇಲ್ಲಿ ವಿಶೇಷವಾಗಿ ಮಹಿಳೆಯರು ಬಂದು ಮತದಾನ ಮಾಡಲಿದ್ದು, ಅವರಿಗೆ ಈ ಬಾರಿ ವಿಶೇಷ ಆದ್ಯತೆ ನೀಡಿದಂತಿದೆ.

ವಿಶಿಷ್ಟಚೇತನ ಮತಗಟ್ಟೆಯು ಕೂಡ ಯಲಬುರ್ಗಾ ಪಟ್ಟಣದಲ್ಲಿ ಸಿದ್ದಪಡಿಸಿದ್ದು, ವಿಶೇಷವಾಗಿದೆ. ಹಾಗೇ ಮುಧೋಳ ಮತ್ತು ತುಮ್ಮರಗುದ್ದಿಯಲ್ಲಿನ ಮಾದರಿ ಮತಗಟ್ಟೆಗಳು ಸಂಪೂರ್ಣ ವರ್ಲಿ ಕಲೆಯಲ್ಲಿ ಬಣ್ಣ ಬಳಿದು ಆಕರ್ಷಣಿಯ ಚಿತ್ರಗಳನ್ನು ಬಿಡಿಸಲಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಅಲ್ಲಿ ಬರೆಸಲಾಗಿದ್ದು, ಮತದಾರರ ಗಮನ ಸೆಳೆಯುವಂತಿವೆ.

Leave A Reply

Your email address will not be published.