ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಸೇವೆನೆ ವಿರೋಧಿ ದಿನಾಚರಣೆ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ :
ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಜೂನ್ 28ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವೆನೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೆವೇಂದ್ರ ಪಂಡಿತ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾದಕ ವಸ್ತುಗಳ ಪರಿಣಾಮದ ಬಗ್ಗೆ ಮಾದಕ ವಸ್ತುಗಳ ವಿರೋಧಕ್ಕೆ ಕಾಲಕಾಲಕ್ಕೆ ರೂಪಿಸಿದ ಕಾನೂನು ನಿಯಮಗಳನ್ನು ತಿಳಿಸಿದರು.
ಜಿಲ್ಲಾ ಕಾರಾಗೃಹದಲ್ಲಿ ಸತತ 08 ತಿಂಗಳುಗಳಿಂದ ಬಂದಿಗಳಿಗೆ ಯೋಗ ಮತ್ತು ಧ್ಯಾನಗಳನ್ನು ನಿರಂತರವಾಗಿ ಮಾಡಿಸುತ್ತಿರುವುದರಿಂದ ಕಾರಾಗೃಹದ ಬಂದಿಗಳು ಪರಿವರ್ತನೆ ಆಗಿರುವುದರ ಬಗ್ಗೆ ಹಾಗೂ ವಿಶೇಷವಾಗಿ ಕೊಪ್ಪಳ ಜಿಲ್ಲಾ ಕಾರಾಗೃಹವು “ತಂಬಾಕು ಮುಕ್ತ ಕಾರಾಗೃಹ” ವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗಂಗಾವತಿ ತಾಲೂಕು ಆಸ್ಪತ್ರೆಯ ಮನೋವೈದ್ಯರಾದ ಡಾ.ವಾದಿರಾಜ್ ಗೋರೆಬಾಳ್ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಬಗ್ಗೆ, ಮಾದಕ ವ್ಯಸನಗಳಿಗೆ ಕಾರಣ, ಪರಿಹಾರಗಳ ಕುರಿತು ತಿಳಿಸಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ವಿ.ಡಿ ಚವ್ಹಾಣ ಅವರು ಕಾರಾಗೃಹದ ಬಂದಿಗಳ ಆರೋಗ್ಯ ಹಾಗೂ ಮಾದಕ ವ್ಯಸನಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಶಾಸ್ತ್ರಜ್ಞರಾದ ಪುಷ್ಪ ಮನ: ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.