deshadoothanews

6 ತಿಂಗಳ ಡಿಪ್ಲೋಮಾ ಕೋರ್ಸ್: ಅರ್ಜೀ ಆಹ್ವಾನ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.
ಕೊಪ್ಪಳ : ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತವಾಗಿ 6 ತಿಂಗಳ ಡಿಪ್ಲೋಮಾ ಕೋರ್ಸ್ ಕಾರ್ಯಕ್ರಮಕ್ಕೆ (ಸಾಮರ್ಥ್ಯ ವೃದ್ಧಿ ತರಬೇತಿ) ಅರ್ಹ ವಿದ್ಯಾರ್ಥಿಗಳಿಗಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಿ-ಡಿಎಡಿ (ಸೆಂಟರ್ ಫಾರ್ ಹೆಚ್.ಪಿ.ಸಿ ಡೆವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್) ಸಂಸ್ಥೆಯವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಿಇ, ಬಿಟೆಕ್, ಬಿಎಸ್ಸಿ, ಬಿಸಿಎ ಹಾಗೂ ಎಂಸಿಎ, ಎಂಎಸ್ಸಿ ಪದವಿಧರರಿಗೆ 6 ತಿಂಗಳ ಡಿಪ್ಲೋಮಾ ಕೋರ್ಸನ್ನು ಉಚಿತವಾಗಿ ನೀಡುತ್ತಿದ್ದಾರೆ. ಈ ಕೋರ್ಸನ ಅವಧಿಯಲ್ಲಿ ಮಾಸಿಕ ರೂ. 10,000 ಗಳ ಶಿಷ್ಯವೇತನ ನೀಡುವುದಲ್ಲದೇ ವಿಫುಲ ಉದ್ಯೋಗಾವಕಾಶಗಳನ್ನು ಸಹ ನೀಡುವುದಾಗಿ ತಿಳಿಸಿರುತ್ತಾರೆ.

ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಈಗಾಗಲೇ ಅಂತಿಮ ವರ್ಷ ಪೂರ್ಣಗೊಳಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಜೂನ್ 23ರೊಳಗಾಗಿ ನೋಂದಣಿ ಮಾಡಿಕೊಂಡು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

ಅಪ್ಲೈ ಮಾಡುವು ಹೇಗೆ: ವೆಬ್‌ಸೈಟ್ https://internship.aicte-india.org ಗೆ ಹೋಗಿ, Student and verify your profile ನಲ್ಲಿ ನೋಂದಣಿ ಮಾಡಿಕೊಂಡು, AICTE lnternships portal and find WBL lnternships ಗೆ ಹೋಗಿ, Check Eligibility and APPIY ನಲ್ಲಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳವರನ್ನು ಸಂಪರ್ಕಿಸುವುದು ಎಂದು ಇಲಾಖಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.