ಕೊಪ್ಪಳ ನಗರದ ಕುಷ್ಟಗಿ ಗೇಟ್ ಸಂ.66ಕ್ಕೆ ಮೇಲ್ಸೇತುವೆಗೆ ಹೆಚ್ಚುವರಿ 11 ಕೋಟಿ ರೂ. ಮಂಜೂರಾತಿಗೆ ಸಂಸದರಾದ ಕರಡಿ ಸಂಗಣ್ಣ ಮನವಿ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕುಷ್ಟಗಿ :
ಕೊಪ್ಪಳ ನಗರದ ಕುಷ್ಟಗಿ ಗೇಟ್ ಸಂ.66 ಮೇಲ್ಸೇತುವೆಗೆ ಪರಿಷ್ಕರಿಸಿದ ಅಂದಾಜು ಮೊತ್ತದ ಹೆಚ್ಚುವರಿ ಅನುದಾನ 11 ಕೋಟಿ ರೂ.ಗೆ ಮಂಜೂರಾತಿ ನೀಡಲು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರು ರೇಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಮೇಲ್ಸೇತುವೆಗೆ ಈ ಹಿಂದೆ ಬಿಡುಗಡೆಯಾದ ಅನುದಾನಕ್ಕೆ ಟೆಂಡರ್ ಸೇರಿದಂತೆ ಇನ್ನೀತರ ಪ್ರಕ್ರಿಯೆಗಳಾಗಿವೆ.
ಭಾಗ್ಯನಗರದ ರೈಲ್ವೆ ಗೇಟ್ ನಂ.62ಗೆ ಮೇಲ್ಸೇತುವೆ ನಿರ್ಮಾಣವಾಗಿ ಮತ್ತು ರೈಲ್ವೆ ಗೇಟ್-64ಕ್ಕು ಸಹ ಕೆಳ ಸೇತುವೆ ನಿರ್ಮಾಣವಾಗಿ ನಗರದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅದೇ ರೀತಿ ಕುಷ್ಟಗಿ ರೈಲ್ವೆ ಗೇಟ್-66 ಮೇಲ್ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದ ಭಾಗವಾಗಿ ಗೇಟ್ ನಂ-66ಗೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಈಗ ಭರದಿಂದ ಸಾಗಿದೆ.
ಕುಷ್ಟಗಿ ರೈಲ್ವೆ ಗೇಟ್-66 ಮೇಲ್ಸೆತುವೆಯಾಗಿದ್ದು, ಈ ಕಾರ್ಯ ಪೂರ್ಣಗೊಂಡಲ್ಲಿ ಜನರಿಗೆ ಅನುಕೂಲವಾಗಲಿದೆ.
ಈ ಹಿಂದೆ ರಾಜ್ಯ ಸರ್ಕಾರದಿಂದ 13 ಕೋಟಿ ರೂ ಹಾಗೂ ಕೇಂದ್ರ ಸರ್ಕಾರದಿಂದ 10.51 ಕೋಟಿ ರೂ ಸೇರಿ 24 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಮುಂದುವರೆದು ಸಾರ್ವಜನಿಕರ ಬೇಡಿಕೆಯಂತೆ ಈ ಮೇಲ್ಸೇತುವೆಯ ನಕ್ಷೆ ಬದಲಾದ ಹಿನ್ನೆಲೆಯಲ್ಲಿ ಈ ಮೇಲ್ಸೇತುವೆಗೆ ಪರಿಷ್ಕರಿಸಿದ ಅಂದಾಜು ಮೊತ್ತದ ಹೆಚ್ಚುವರಿ ಅನುದಾನ 11 ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ.
ಇದರಿಂದ ಸುಸಜ್ಜಿತವಾಗಿ ಸೇತುವೆ ನಿರ್ಮಾಣವಾಗಿ ಸೇತುವೆ ಆಚೆಯ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಮತ್ತು ಈ ರಸ್ತೆ ಅವಲಂಬಿಸಿ ನಿತ್ಯ ಸಂಚರಿಸುವ ಕುಷ್ಟಗಿ ಹಾಗು ಇನ್ನೀತರ ತಾಲೂಕುಗಳ ನೂರಾರು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಇದೆ ರೀತಿ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯಿಂದ ಉತ್ತಮ ಕಾರ್ಯಗಳಾಗಿವೆ ಎಂದು ಸಂಸದರಾದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.