Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಭಗವಂತನ ಸ್ಮರಣೆ ಮಾಡಬೇಕು : ಶ್ರೀ ಗಳು

ಡಿ.ಡಿ. ನ್ಯೂಸ್ : ಯಲಬುರ್ಗಾ

Advertisement

ಯಲಬುರ್ಗಾ ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ಬು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ನಾವುಗಳು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಆಗಿ ಹುಣ್ಣಿಮೇಯ ದಿನದ 81ನೇ ಶಿವಾನುಭವ ಗೋಷ್ಠಿಯಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಇನ್ನೋಬ್ಬರಿಗೆ ಕೆಡಕನ್ನು ಬಯಸದೆ ,ಅವರ ಮನಸ್ಸಿಗೆ ನೂವುಂಟು ಮಾಡಲಾರದೆ ಒಳಿತು ಮಾಡುವ ಕಾರ್ಯಮಾಡುವಲ್ಲಿ ಮುಂದಾಗಬೇಕು ಎಂದರು. 

ದಮ್ಮೂರಿನ ಶ್ರೀ ಭೀಮಾಂಬಿಕಾದೇವಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ ಸಾನಿದ್ಯವಹಿಸಿದ್ದರು. news_1777822642_0_908.webpಭಕ್ತನಾದೋಡೆ ಬಾಳೆಹಣ್ಣಿನಂತೆ ಇರಬೇಕು ಎಂಬ ವಚನದ ಸಾರಂಶದ ಬಗ್ಗೆ ಹಿರೇವಂಕಲಕುಂಟಾದ ಯೋಗ ಗುರು ಹರ್ಷಾನಂದ ಅವರು ಮಾತನಾಡಿ ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಬೇಕು ಶಿಕ್ಷಣ ಕಲಿತ ಮಕ್ಕಳು ಹಾಳಗ ಬಹುದು ಸಂಸ್ಕಾರ ಕಲಿತ ಮಕ್ಕಳು ಎಂದು ಹಾಳಗುವದಿಲ್ಲ ಎಂದರು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸಿಮಿತವಾಗಬಾರದು ,ಗುರು ಹಿರಿಯಲ್ಲಿ ವಿನಯದಿಂದ ಬಾಗಿದಾಗ ಉನ್ನಮಟ್ಟದಲ್ಲಿ ಬೆಳೆಯಲು ಸಾದ್ಯ ಎಂದು ದಮ್ಮೂರ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಮಾತನಾಡಿದರು. ಭಕ್ತನಾದೋಡೆ ಬೆಲ್ಲದ ಕುಳ್ಳಿಯಂತಿರಬೇಕು ಎಂದು ವಚನದ ಸಾರಂಶದ ಬಗ್ಗೆ ತರ್ಲಕಟ್ಟಿಯ ಮುದಿಯಪ್ಪ ಮೇಟಿ ಅವರು ಮಾತನಾಡಿದರು. 

ಈ ವೇಳೆ ಶರಣರಾದ ಶಂಕರಗೌಡ ಮಾಲಿಪಾಟೀಲ್, ನೀಲನಗೌಡ ಹೊಸಮನಿ,ನಿಂಗಪ್ಪ ಹಳ್ಳಿಕೇರಿ,ದುರಗಪ್ಪ ಮಕ್ಕಳ್ಳಿ, ಮಳಿಯಪ್ಪಯ್ಯ, ಅಲಿಸಾಬ ನದಾಫ್, ಹುಸೇನಸಾಬ ಹಿರೇಕೊಪ್ಪ,ಚಂದ್ರಶೇಖರ ಕೋಗಿಲೆ,ಶರಣಯ್ಯ ಬಳಗನೂರ,, ದೇವಪ್ಪ ಹಡಪದ, ಪಾಲಕ್ಷಪ್ಪ ಪತ್ತಾರ , ನಾಗನಗೌಡ ಮಾಲಿಪಾಟೀಲ್,ಸಂಗಪ್ಪ ಹುಣಸಿಹಾಳ,ಫಕೀರಗೌಡ ಮಾ.ಪಾಟೀಲ, ಮರೆಗೌಡ ಸಂಗನಾಳ, ಬಾಳಪ್ಪ ಜರಕುಂಟಿ, ಹನುಮಪ್ಪ ರಾವಣಕಿ, ಯಮನಗೌಡ್ರ ಮಾಲಿ ಪಾಟೀಲ ,ಕಾವೇರಿ ನಾವಡೆ, ಅಂಬಿಕಾ ಎನ್,ಶರಣಪ್ಪ ಭೂತಲ್, ಕಾಳೇಶ ಕಮ್ಮಾರ,, ಷಣ್ಮೂಖಪ್ಪ ಕೋವಿ,ಗುನ್ನೇಪ್ಪ ಚೆನ್ನದಾಸರ ಸೇರಿದಂತೆ ಇತರರು ಇದ್ದರು.

 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!