Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಹೋರಾಟಕ್ಕೆ ಸಂದ ಜಯವೇ ಕಾರ್ಮಿಕರ ದಿನಾಚರಣೆ ಸಂಭ್ರಮಕ್ಕೆ ಕಾರಣ - ಬಸವರಾಜ ಶೀಲವಂತರ

ಡಿ.ಡಿ. ನ್ಯೂಸ್ ಕೊಪ್ಪಳ

Advertisement

ಕೊಪ್ಪಳ ಹೋರಾಟಕ್ಕೆ ಸಂದ ಜಯವೇ ಕಾರ್ಮಿಕರ ದಿನಾಚರಣೆ ಸಂಭ್ರಮಕ್ಕೆ ಕಾರಣ ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಹೇಳಿದರು.

ಕೊಪ್ಪಳ ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಗರದ ಶಾರದಾ ಟಾಕೀಸ್ ಹಿಂದಿನ ರಸ್ತೆಯಲ್ಲಿರುವ ತನ್ನ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿದ ಬಸವರಾಜ ಶೀಲವಂತರ ಕಾರ್ಮಿಕರ ಹೋರಾಟ 1880 ರಲ್ಲಿ ಒಂದ ಕಡೆ ಕೆನಡಾ ಮತ್ತೊಂದು ಕಡೆ ಚಿಕಾಗೋ ದಲ್ಲಿ ತೀವ್ರತೆ ಪಡೆದುಕೊಂಡಿತ್ತು. ಚಿಕಾಗೋ ದಲ್ಲಿ ನಡೆದ ಹೋರಾಟ ಹಿಂಸಾತ್ಮಕವಾಗಿ ಪರಿವರ್ತನೆ ಆಯಿತು. ಅದರಲ್ಲಿ ಸಾಕಷ್ಟು ಕಾರ್ಮಿಕರು ಬಲಿಯಾಗಿ ರಕ್ತದ ಕೋಡಿಯೆ ಹರಿಯಿತು.ಕಾರ್ಮಿಕರ ಹೋರಾಟ ತ್ಯಾಗ ಬಲಿದಾನದಿಂದ ಸಿಕ್ಕ ಜಯ ವಿಜಯೋತ್ಸವದ ಸಂಭ್ರಮದ ದಿನ ಎಂದು ನುಡಿದರು.news_1777820702_0_435.webpನಗರ ಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ಮಾತನಾಡಿ ಕಾರ್ಮಿಕ ದಿನಾಚರಣೆ ಸಂಭ್ರಮ ಸಂತೋಷ ತಂದಿದೆ.ಕಟ್ಟಡ ಕಾರ್ಮಿಕರು ಸಹಕಾರ ಸಂಘ ರಚಿಸಿಕೊಳ್ಳಿ ನಮ್ಮಲ್ಲಿ ಇರುವ ಬೈಲಾ ಹಾಗೂ ಮಾಹಿತಿ ಕೊಡುತ್ತೇನೆ ಎಂದು ಸಲಹೆ ನೀಡಿದರು.

ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ವಿಶ್ವದಲ್ಲಿ ಮೊದಲು ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ ಬೀದಿಗಳಲ್ಲಿ ಸಭೆಗಳನ್ನು ನಡೆಸಿ ಕಾರ್ಮಿಕರಿಗೆ ಎಂಟು ತಾಸು ಕೆಲಸ ಮಾಡಲು ಜಾಗೃತಿ ಮೂಡಿಸುತ್ತಿದ್ದರು.ಆಗ ರಾಜರ ಆಳ್ವಿಕೆಯ ಕಾಲದಲ್ಲಿ ರಾಜರು ತಮ್ಮ ರಾಜ್ಯದಿಂದ ಗಡಿ ಪಾರು ಮಾಡುತ್ತಿದ್ದರು.ಕ್ರಾಂತಿಯ ಕಿಡಿಯಿಂದ ಜಾಗೃತಗೊಂಡ ಕಾರ್ಮಿಕರು ಚಿಕಾಗೋ ದಲ್ಲಿ ನಡೆದ ಹೋರಾಟದ ವೇಳೆ ಸಂಘರ್ಷಕ್ಕೆ ತಿರುಗಿ ರಕ್ತಪಾತ ಸಂಭವಿಸಿ ಹರಿಯುತ್ತಿದ್ದ ರಕ್ತದಲ್ಲಿ ಬಟ್ಟೆ ಒದ್ದೆ ಮಾಡಿ ಕೆಂಪು ಧ್ವಜದ ಸಂಕೇತವಾಗಿ ಎತ್ತಿ ಹಿಡಿದು ಜಯ ಸಾಧಿಸಿದರ ಪ್ರತಿಫಲವಾಗಿ ಎಂಟು ತಾಸು ಕೆಲಸ ಮಾಡುವ ಅವಕಾಶ ಪಡೆದ ದುಡಿಯುವವರು ಕಾರ್ಮಿಕ ದಿನ ಆಚರಿಸುತ್ತಿದೆ.ಕಟ್ಟಡ ಕಾರ್ಮಿಕರಿಗೆ ಕಿಟ್ ಗಳ ನೆಪದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ. ಹಿಂದಿನ ಸರ್ಕಾರಕ್ಕೆ ಕಟ್ಟಡ ಕಾರ್ಮಿಕರಿಗೆ ಯಾವುದೇ ಕಿಟ್ ಗಳು ಬೇಡ ಎಂದು ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಕಿಟ್ ವಿತರಣೆ ನಿಲ್ಲಿಸಿಲ್ಲ ಅದಕ್ಕೆ ಚುನಾವಣೆಯಲ್ಲಿ ಸರ್ಕಾರ ಬದಲಾಯಿಸಲಾಯಿತು. ಕಾರ್ಮಿಕ ಸಚಿವನಾದಾಗ ಸಂತೋಷ ಲಾಡ್ ಶ್ರೀಮಂತನಾಗಿದ್ದು ಭ್ರಷ್ಟಾಚಾರ ನಡೆಸುವುದಿಲ್ಲ ಎಂದು ನಂಬಿಕೆ ಇಟ್ಟು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡರು ಭೇಟಿ ಮಾಡಿ ಭ್ರಷ್ಟಾಚಾರ ನಡೀತಿದೆ ಕಿಟ್ ಗಳ ನಿಲ್ಲಬೇಕು ಎಂದು ಮನವರಿಕೆ ಮಾಡಿ ಬಂದ ಒಂದು ತಿಂಗಳಲ್ಲೇ ಮತ್ತೆ ಕಿಟ್ ವಿತರಣೆಗೆ ಟೆಂಡರ್ ಕರೆದರು.ಈಗ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಗಾಗಿ ತಲಾ ಒಂದಕ್ಕೆ ರೂ 8625 ರಂತೆ ಒಟ್ಟು 115 ಕೋಟಿ 84 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿತರಣೆಗೆ ಗುರುವಾರ ಸಚಿವ ಸಂಪುಟದಲ್ಲಿ ಮಂಜೂರು ಮಾಡಿದ್ದಾರೆ. ಇದು ಹಗರಣದ ಮುಂದುವರೆದ ಭಾಗ.ಟೆಂಡರ್ ಗಳನ್ನು ತಡೆಯಲು ಮತ್ತು ನಿಜವಾದ ಕಟ್ಟಡ ಕಾರ್ಮಿಕರಿಗೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ಅರ್ಜಿಗಳನ್ನು ತಿರಸ್ಕರಿಸದೆ ಸರಿಯಾಗಿ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಲ್ಲಾ ಕಟ್ಟಡ ಕಾರ್ಮಿಕರು ಹೋರಾಟಕ್ಕೆ ಸಿದ್ದರಾಗಬೇಕು ಎಂದು ಕರೆ ನೀಡಿದರು.

ಕೊಪ್ಪಳ ತಾಲೂಕಿನ ಬಹಾದ್ದೂರ್ ಬಂಡಿ ಗ್ರಾಮದ ಗ್ರಾಮೀಣ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಮಹೆಬೂಬ್ ಎಸ್.ಮಣ್ಣೂರ ಮಾತನಾಡಿ ಸಂಘದ ನೇತೃತ್ವ ವಹಿಸುವವರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪ್ರತಿಯೊಬ್ಬ ಕಾರ್ಮಿಕರ ಹಿತ ದೃಷ್ಟಿಯಿಂದ ಅವರಿಗೆ ಸರ್ಕಾರದಿಂದ ಸೌಲಭ್ಯಗಳು ಏನೇನು ಸಿಗುತ್ತವೆ ಅವುಗಳೆಲ್ಲ ಚಾಚು ತಪ್ಪದೇ ಮಾಡುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ಕೊಪ್ಪಳ ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶಹಾಬುದ್ದೀನ್ ಜವಳಗೇರ ವಹಿಸಿದ್ದರು.ವೇದಿಕೆ ಮೇಲೆ ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಜಾಫರ್ ಕುರಿ. ಉಪಾಧ್ಯಕ್ಷ ರಾಮಣ್ಣ ಬಣಕಾರ್.ಖಜಾಂಚಿ ಸಿದ್ದಲಿಂಗಪ್ಪ ಪಲ್ಲೇದ.ಮೌಲಾ ಹುಸೇನ್ ಹಣಗಿ. ಮಹೆಬೂಬ್ ಬಾಳೆಹಣ್ಣು. ಭಾಗ್ಯನಗರದ ಕಟ್ಟಡ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಕಟ್ಟಿಮನಿ.ಹಿರಿಯ ಕಟ್ಟಡ ಕಾರ್ಮಿಕ ಮುಖಂಡ ದೇವೇಂದ್ರಪ್ಪ. ಹುಸೇನಪ್ಪ ಗುಡಿ.ಖಾಜಾಸಾಬ್ ಕಮ್ತರ.ವಹಾಬ್ ಸಾಬ್ ಚಾರ್ಲಿ ಮೇಸ್ತ್ರಿ.ಇಂಜಿನಿಯರ್ ಮೊಹಮ್ಮದ್ ಎಜಾಝ್ ಖಾನ್. ಮೊಹಮ್ಮದ್ ಖಾಲಿದ್ ಸಿದ್ದೀಕಿ.ಸೋಮಣ್ಣ ಧನಕರ. ಇಸ್ಮಾಯಿಲ್ ಸಾಬ್ ಕಮತರ. ಇಸ್ಮಾಯಿಲ್ ಸಾಬ್ ಕೋಲ್ಕಾರ. ತಿಪ್ಪಣ್ಣ ಬಿಸರಹಳ್ಳಿ. ಈಬತ್ತಿ ಮಂಜುನಾಥ.ನಿಂಗಪ್ಪ ಸುಣಗಾರ.ಮಹೆಬೂಬ್ ಸಿಕ್ಕಲಗಾರ.ದೇವಪ್ಪ ಚಿಗರಿ ಮುಂತಾದವರು ಉಪಸ್ಥಿತರಿದ್ದರು.

ಕಟ್ಟಡ ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡರಾದ ರಮೇಶ್ ಘೋರ್ಪಡೆ.ಕಾರ್ಮಿಕ ಇಲಾಖೆಯ ಹೆಮಂತ್ ಸಿಂಗ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದ ಗವಿಮಠದಿಂದ ಗಡಿಯಾರ ಕಂಭದವರಿಗೆ ಕಟ್ಟಡ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಿತು.

ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ 

 ಪ್ರಧಾನಿ ಕಾರ್ಯದರ್ಶಿ ಹಝ್ರತ ಅಲಿ ಮುಜಾವರ ಸ್ವಾಗತಿಸಿ. ನಿರೂಪಿಸಿ.ಕೊನೆಯಲ್ಲಿ ವಂದಿಸಿದರು.

 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!