Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಹದಗೆಟ್ಟ ಗಂಗಾವತಿ-ಆರಾಳ ರಾಜ್ಯ ಹೆದ್ದಾರಿ!

ಡಿ.ಡಿ. ನ್ಯೂಸ್ : ಗಂಗಾವತಿ

Advertisement

*ಕಳೆದ ಮೂರು ವರ್ಷಗಳಿಂದ ದುರಸ್ತಿಗೆ ಮನವಿ,ಅಧಿಕಾರಿಗಳ ನಿರ್ಲಕ್ಷ್ಯ

*ಶೀಘ್ರ ದುರಸ್ತಿಯಾಗದಿದ್ದರೆ ರಸ್ತೆ ತಡೆದು ಪ್ರತಿಭಟನೆ.

ಗಂಗಾವತಿ ತಾಲೂಕಿನ-ಆರಾಳ ಗ್ರಾಮದಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ಕಳೆದ ಮೂರು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹದಗೆಟ್ಟಿದ್ದು ವಾಹನಗಳು,ಬೈಕ್ ಹಾಗೂ ಜನ ಸಂಚಾರಕ್ಕೆ ಅಯೋಗ್ಯವಾಗಿದೆ. ಆರಾಳ,ಮಲಕನಮರಡಿ, ಉಡುಮಕಲ್ ಸೇರಿ ಸುತ್ತಲಿನ ಈ ರಸ್ತೆಗಳಲ್ಲಿ ಓಡಾಡುವ ಗ್ರಾಮಗಳ ಜನರು ಅಧಿಕಾರಿಗಳು ಹಾಗೂ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.news_1777821632_0_383.webpವಡ್ಡರಹಟ್ಟಿಯಿಂದ ಕನಕಗಿರಿ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಇದ್ದು ಈಗಾಗಲೇ ವಿವಿಧ ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಬಿಲ್ ಎತ್ತುವಳಿ ಮಾಡಲಾಗಿದೆ ಎಂದು ಆರಾಳ ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾರ್ವಜನಿಕರ ವಾಹನಗಳ ಜತೆ ಆರಾಳ,ಮಲಕನಮರಡಿ ಸೇರಿ ಸುತ್ತಲಿನ ಗ್ರಾಮಗಳ ರೈತರು ಬೆಳೆಯುವ ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಇದೇ ಮಾರ್ಗದ ಮೂಲಕ ಗಂಗಾವತಿ ತಂದು ಮಾರಾಟ ಮಾಡಬೇಕಿದೆ.ಜತೆಗೆ ಶಾಲಾ,ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ತೆರಳಬೇಕಿದೆ. ಆಸ್ಪತ್ರೆಗೆ ಹೋಗುವವರ ಗೋಳು ಕೇಳುವವರು ಇಲ್ಲವಾಗಿದೆ.news_1777821646_0_112.webpತುಂಗಭದ್ರಾ ಎಡದಂಡೆಯ ಕಾಲುವೆ ಆರಾಳ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಅವೈಜ್ಞಾನಿಕವಾಗಿದ್ದು ಪುನರ್ ನಿರ್ಮಾಣದ ಜತೆಗೆ ವಡ್ಡರಹಟ್ಟಿ ಯಿಂದ ಕನಕಗಿರಿ ರಸ್ತೆಯ ವರೆಗಿನ ರಸ್ತೆಯನ್ನು ದುರಸ್ತಿ ಮಾಡಲು ಅನೇಕ ವರ್ಷಗಳಿಂದ ಮನವಿ ಮಾಡಿದರೂ ಜನಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು ರಸ್ತೆ ಕಾಮಗಾರಿ ಆರಂಭವಾಗದಿದ್ದಾರೆ ವಡ್ಡರಹಟ್ಟಿ ಕನಕಗಿರಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಆರಾಳ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆರಾಳ ಗ್ರಾಮದ ರೈತರಾದ ಹನುಮಂತಪ್ಪ ಡಂಬರ್,ಈಶಪ್ಪ ಕೋರಿ,ಬೆಟ್ಟಪ್ಪ ಇಳಿಗೇರ್,ಮಡಿವಾಳಪ್ಪ, ಶರಣಪ್ಪ,ರುದ್ರಗೌಡ,ಗವಿಸಿದ್ದಪ್ಪ,ಪಂಪಾಪತಿ,ವೆಂಕಟೇಶ ತಬಾಲಿ,ಫಕೀರಪ್ಪ ಹರಿಜನ,ವಿರೇಶಪ್ಪ ಡ್ಯಾಗಿ,ಉಮೇಶ,ಪಂಪಾಪತಿ ಎಚ್,ಹನುಮಂತಪ್ಪ ನಾಯಕ,ಬಾಲಪ್ಪ ಭಜಂತ್ರಿ,ದುರುಗೇಶ,ಹನುಮಂತಪ್ಪ ಉಪ್ಪಾರ,ಬಸವಣ್ಣ ಮ್ಯಾಗೇರಿ ಸೇರಿ ಅನೇಕರಿದ್ದರು.

ಗಂಗಾವತಿ ಆರ್ ಆರ್ ರಸ್ತೆ ದುರಸ್ತೆ ಕುರಿತಂತೆ ಈ ವರ್ಷದ ಯೋಜನೆಯಲ್ಲೇ ಸೇರಿಸಲಾಗಿದೆ ಲೋಕೋಪಯೋಗಿ ಇಲಾಖೆಯ 50-54 ಯೋಜನೆ ಇಡೀ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೈಗೊಳ್ಳಲಾಗಿದೆ ಶೀಘ್ರದಲ್ಲಿ ಸರ್ಕಾರದಿಂದ ಕಾಮಗಾರಿ ಮಾಡುವಂತೆ ಟೆಂಡರ್ ಸೇರಿದಂತೆ ಅಗತ್ಯ ಹಣಕಾಸು ನಿಗದಿಯಾಗಲಿದೆ.

-ವಿಶ್ವನಾಥ ಎಇಇ ಲೋಕೋಪಯೋಗಿ ಇಲಾಖೆ.

ಆರಾಳ ಗ್ರಾಮಸ್ಥರು ತಮ್ಮನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದು ವಡ್ಡರಹಟ್ಟಿಯಿಂದ ಆರಾಳ ಗ್ರಾಮದವರೆಗೂ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ರಸ್ತೆ ಮತ್ತು ಎಡದಂಡೆ ಕಾಲುವೆಗೆ ಇರುವ ಬೃಹತ್ ಗಾತ್ರದ ಸೇತುವೆ ಮತ್ತು ಸಣ್ಣಪುಟ್ಟ ಸೇತುವೆಗಳ ನಿರ್ಮಾಣ ಮಾಡಲು 10 ಕೋಟಿ ರೂಪಾಯಿ ಡಿಪಿಆರ್ ತಯಾರಿಸಲಾಗಿದೆ. ಸರಕಾರದಿಂದ ಅನುದಾನ ಬಂದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ.

-ಗಾಲಿ ಜನಾರ್ದನ ರೆಡ್ಡಿ ಶಾಸಕ

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!