Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಬಲ್ಡೋಟ ವಿರೋಧಿ ಹೋರಾಟಕ್ಕೆ 184 ದಿನ

ಡಿ.ಡಿ. ನ್ಯೂಸ್ ಕೊಪ್ಪಳ

Advertisement

ಅಭಿವೃದ್ಧಿ ಎಂದರೆ, ಕೈಗಾರಿಕೆಯದಾ ಅಥವಾ ಕೊಪ್ಪಳ ಜನರದ್ದಾ: ಶಿವಸುಂದರ್ ಪ್ರಶ್ನೆ

ಕೊಪ್ಪಳ ಅಭಿವೃದ್ಧಿ ಕಲ್ಪನೆಯೇ ತೀರಾ ವಿಚಿತ್ರವಾಗಿದೆ, ಅಭಿವೃದ್ಧಿ ವಿಷಯ ಮರುವ್ಯಾಖ್ಯಾನ ಆಗಬೇಕಿದೆ, ಹವಾಮಾನ ವೈಪರಿತ್ಯಗಳು ಕಂಡುಕೇಳರಿಯದಂತೆ ಆಗುತ್ತಿವೆ ಎಂದು ನಾಡಿನ ಹಿರಿಯ ಚಿಂತಕ ಶಿವಸುಂದರ್ ವಿಷಾಧಿಸಿದರು.

ಅವರು ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಕೊಪ್ಪಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ 184ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. news_1777737435_0_171.webpಬಳ್ಳಾರಿ, ವಿಜಯನಗರ ಜಿಲ್ಲೆಯ ಉಕ್ಕಿನ ಅದಿರಿನಿಂದ, ಕೊಪ್ಪಳ ಕಾರ್ಖಾನೆಗೆ ವಶಪಡಿಸಿಕೊಂಡ ಭೂಮಿಯಿಂದ ಯಾರು ಶ್ರೀಮಂತರಾಗಿದ್ದಾರೆ. ಸರ್ಕಾರಗಳು ಏಕೈಕ ಕಾರ್ಪೋರೇಟರಗಳನ್ನು ಶ್ರೀಮಂತಗೊಳಿಸಿವೆ, ಇಲ್ಲಿನ ಜನರು ಹೋರಾಡಿ ಆರೋಗ್ಯ, ಜೀವ ಉಳಿಸಿಕೊಳ್ಳುವಾಗ ರಾಜ್ಯದ ಪ್ರಜ್ಞಾವಂತರು ನಿಮ್ಮ ಬೆಂಬಲಕ್ಕೆ ಇರುತ್ತಾರೆ. 

ಈ ಹೋರಾಟ ಗೆಲ್ಲಬೇಕು, ಇದು ಕೇವಲ ಕೊಪ್ಪಳದ್ದಲ್ಲ ಇಡೀ ಭಾರತದ ಕಾರ್ಪೊರೇಟ್ ವಿರುದ್ಧದ ಸಮರ, ಇದಕ್ಕಾಗಿ ಇಡೀ ದೇಶದ ಪ್ರಜ್ಞಾವಂತ ಜನರನ್ನು ಕರೆದುಕೊಂಡು ಬರುತ್ತೇವೆ, ಇದು ದೇಶದ ಸಮಸ್ಯೆ, 184 ದಿನ ನಿರಂತರವಾಗಿ ಹೋರಾಡುವ ಛಾತಿ ಬೆಳೆಸಿಕೊಂಡಿರುವ ಕೊಪ್ಪಳ ಜನ ಅಭಿನಂದನಾರ್ಹರು ಎಂದರು.

ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ, ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಶುಕರಾಜ ತಾಳಕೇರಿ, ಎಂ.ಡಿ. ಸಿರಾಜ್ ಸಿದ್ದಾಪುರ, ಮಹಾಂತೇಶ ಕೊತಬಾಳ, ಮದ್ದಾನಯ್ಯ ಹಿರೇಮಠ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ, ಮಹಿಳಾ ನಾಯಕಿಯರಾದ ಸಾವಿತ್ರಿ ಮುಜುಮದಾರ, ಸಲೀಮಾ ಜಾನ್, ಕೆ.ಎಫ್. ಮುದ್ದಾಬಳ್ಳಿ, ಹನುಮನಗೌಡ ಫೋ ಪಾಟೀಲ್, ಯಂಕಪ್ಪ ಬಿಸರಹಳ್ಳಿ ಕಾಸನಕಂಡಿ, ಹನುಮಪ್ಪ ಚಿಂಚಲಿ, ಅಮರೇಶ ಕರಡಿ, ಈಶ್ವರಪ್ಪ ಆರಹಾಳ, ಫಕೀರಪ್ಪ ಹಿರೇನಂದಿಹಾಳ, ಕರಿಯಪ್ಪ ಹಿರೇನಂದಿಹಾಳ, ಬಸವರಾಜ ಬನ್ನಿಕಟ್ಟಿ, ಶರಣಪ್ಪ ನಂದಾಪುರ, ಮಹಾದೇವಪ್ಪ ಮಾವಿನಮಡು, ದುರುಗೇಶ ಬರಗೂರು, ರಾಜಶೇಖರ ಏಳುಬಾವಿ, ಶಿವಾನಂದಯ್ಯ ಬೀಳಗಿಮಠ, ಶಂಭುಲಿಂಗಪ್ಪ ಹರಗೇರಿ, ವಿಜಯಹಾಂತೇಶ ಹಟ್ಟಿ, ಮಖಬೂಲ್ ರಾಯಚೂರು, ವೈ. ಸತ್ಯನಾರಾಯಣ, ಬೆಟ್ಟಪ್ಪ ಯತ್ನಟ್ಟಿ, ಬಸವಂತಪ್ಪ ಚೌಹಾನ್ ಇತರರು ಇದ್ದರು.

 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!